ಆನಂದ
From Wikipedia
ಆನಂದ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ ಅಜ್ಜಂಪುರ ಸೀತಾರಾಮ್ ರವರು ೧೯೦೨, ಅಗಸ್ಟ್ ೧೮ ರಂದು ತಮ್ಮ ತಾಯಿಯ ತವರೂರಾದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷಮ್ಮ. ತಂದೆ ಅನಂತಯ್ಯನವರು ಶಿವಮೊಗ್ಗಾದಲ್ಲಿ ಪ್ರಸಿದ್ಧ ವಕೀಲರಾಗಿದ್ದರು. ಅಲ್ಲದೆ ಮೈಸೂರು ಸಂಸ್ಥಾನದ ಅಸೆಂಬ್ಲಿ ಸದಸ್ಯರು ಅಗಿದ್ದರು. ಅನಂತಯ್ಯನವರ ಸಾರ್ವಜನಿಕ ಸೇವೆಗಾಗಿ ಮೈಸೂರು ಮಹಾರಾಜರು ಚಿನ್ನದ ಪದಕವನ್ನಿತ್ತು ಸನ್ಮಾನಿಸಿದ್ದರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗಾದಲ್ಲಿಯೆ ಮುಗಿಸಿದ ಸೀತಾರಾಮ್ ೧೯೨೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವಿಜ್ಞಾನ ಪದವಿಗೆ ಸೇರಿದರು. ೧೯೩೧ ರಲ್ಲಿ ತಂದೆಯ ಬಲವಂತದಿಂದಾಗಿ ಕಾನೂನು ಪದವಿ ಪಡೆಯಲು ಪುಣೆಗೆ ತೆರಳಿದರು. ಆದರೆ ಪರೀಕ್ಷೆ ಮುಗಿಸದೆ ಹಿಂತಿರುಗಿ ಬಂದು ಸರಕಾರದ ರೇಷ್ಮೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡರು.
[ಬದಲಾಯಿಸಿ] ವಿವಾಹ ಹಾಗು ಕುಟುಂಬ ಜೀವನ
೧೯೨೫ ರಲ್ಲಿಯೆ ಸೀತಾರಾಮ್ ಇವರ ವಿವಾಹ ಮದರಾಸಿನಲ್ಲಿ (ಈಗಿನಚೆನ್ನೈ )ಹೈಕೋರ್ಟ ವಕೀಲರಾಗಿದ್ದ ಸೀತಾರಾಮಯ್ಯನವರ ಮಗಳು ಪಾರ್ವತಿಯೊಡನೆ ಜರುಗಿತು. ಆದರೆ ಮದುವೆಯಾದ ವರ್ಷದಲ್ಲೆ ವಿಷಮಶೀತಜ್ವರದಿಂದ ಬಳಲಿದ ಪಾರ್ವತಿ ಇನ್ನಿಲ್ಲವಾದಳು.೧೯೨೭ ರಲ್ಲಿ ಸೀತಾರಾಮ್ ಶಾರದಮ್ಮನವರ ಜೊತೆ ಮದುವೆಯಾಗಿ, ಮುಂದೆ ನಾಲ್ಕು ಮಕ್ಕಳನ್ನು (ಪಾರ್ವತಿ, ಲೀಲಾವತಿ, ಆನಂದ, ವಿಜಯಕುಮಾರ) ಪಡೆದರು. ಇವರಲ್ಲಿ ಎರಡನೆಯ ಮಗಳು ಲೀಲಾವತಿ ಮೂರು ವರ್ಷದ ಮಗುವಾಗಿದ್ದಾಗಲೆ ಮೆದಳುಜ್ವರಕ್ಕೆ ತುತ್ತಾಗಿ ಮರಣವನ್ನಪ್ಪಿದಳು. ೧೯೫೨ ರಲ್ಲಿ ಇವರ ಅಳಿಯ ಚಂದ್ರಶೇಖರ ಅಪಘಾತದಲ್ಲಿ ನಿಧನರಾದರು. ೧೯೭೮ ರಲ್ಲಿ ಪತ್ನಿ ಶಾರದಮ್ಮ ತಿರಿಕೊಂಡರು. ೧೯೮೬ರಲ್ಲಿ ಹಿರಿಯ ಮಗ ಆನಂದ ತೀರಿ ಹೋದ. ಇವೆಲ್ಲ ಆಘಾತಗಳ ನಡುವೆಯೂ ಸೀತಾರಾಮ್ ತಮ್ಮ ಸುತ್ತಲಿದ್ದವರಿಗೆ ಸರಸ ಹಾಸ್ಯವನ್ನೆ ಹಂಚಿದರು.
[ಬದಲಾಯಿಸಿ] ನಿಧನ
ಅಜ್ಜಂಪುರ ಸೀತಾರಾಮ್ ೧೯೬೩ ರಲ್ಲಿ ನಿಧನರಾದರು.
[ಬದಲಾಯಿಸಿ] ಆನಂದರ ಸಾಹಿತ್ಯ
[ಬದಲಾಯಿಸಿ] ಕಥಾಸಂಕಲನ
- ಕೆಲವು ಕಥೆಗಳು (೧೯೩೦)
- ಭವತಿ ಭಿಕ್ಷಾಂದೇಹಿ (೧೯೩೦)
- ಮಾಟಗಾತಿ (೧೯೩೪)
- ಚಂದ್ರಗ್ರಹಣ ಮತ್ತು ಇತರ ಕತೆಗಳು (೧೯೩೯)
- ಸ್ವಪ್ನಜೀವಿ ಮತ್ತು ಇತರ ಕತೆಗಳು (೧೯೪೫)
- ಜೋಯಿಸರ ಚೌಡಿ (೧೯೪೫)
- ಬೇವು ಬೆಲ್ಲ (೧೯೫೧)
- ಗ್ಯಾಸ್ಕೋಯಿನ್ (೧೯೫೧)
- ಈಸೋಪನ ನೀತಿಕತೆಗಳು (೧೯೫೧)
- ಸಂಸಾರಶಿಲ್ಪ ಮತ್ತು ಇತರ ಕತೆಗಳು (೧೯೫೨)
- ಅಶ್ರು-ಬಾಷ್ಪ (೧೯೫೪)
- ಶಿಲ್ಪಿ ಸಂಕುಲ (೧೯೫೫)
- ಆನಂದರ ಆಯ್ದ ಕತೆಗಳು (೧೯೮೫)
[ಬದಲಾಯಿಸಿ] ನಾಟಕಗಳು
- ದಹನಚಿತ್ರ (೧೯೪೫)
- ವೀರಯೋಧ (೧೯೫೬)
- ಸುಶೀ ವಿಜಯ (೧೯೬೩)
[ಬದಲಾಯಿಸಿ] ಪ್ರಬಂಧ ಸಂಕಲನ
- ಆನಂದ ಲಹರಿ (೧೯೫೪)
[ಬದಲಾಯಿಸಿ] ವಚನಚಿತ್ರ
- ಪಕ್ಷಿಗಾನ (೧೯೪೭)
[ಬದಲಾಯಿಸಿ] ಕಾದಂಬರಿga
- ರಾಬಿನ್ಸನ್ ಕ್ರೂಸೋ ಕತೆ (೧೯೫೦)
(ಮೂಲ: ಡೇನಿಯಲ್ ಡಿಫೋ ಬರೆದ ಕಾದಂಬರಿ)
- ಸಿರಿದ್ವೀಪ (೧೯೫೫)
(ಮೂಲ: ರಾಬರ್ಟ ಲೂಯಿ ಸ್ಟೀವನ್ಸನ್ ಬರೆದ ' ಟ್ರೆಜರ್ ಐಲ್ಯಾಂಡ ' )
- ಪುರುಷಾಮೃಗ (೧೯೫೬
(ಮೂಲ: ರಾಬರ್ಟ ಲೂಯಿ ಸ್ಟಿವನ್ಸನ್ ಬರೆದ ' ದಿ ಸ್ತ್ರೇಂಜ್ ಕೇಸ್ ಅಫ್ ಡಾ:ಜೆಕಿಲ್ ಎಂಡ್ ಮಿಸ್ಟರ್ ಹೈಡ್)
- ಉಗ್ರಪರೀಕ್ಷೆ (೧೯೫೮)
(ಮೂಲ: ಟಾಲ್‍ಸ್ಟಾಯ್ ಬರೆದ ಕಾದಂಬರಿ ' ಆರ್ಡಿಯಲ್ ' ಇದರ ೩ ಭಾಗಗಳು)
- ಲಿಯೊ ಟಾಲ್‍ಸ್ಟಾಯ್ (೧೯೫೮)
(ಮೂಲ: ಲಿಯೊ ಟಾಲ್‍ಸ್ಟಾಯ್ ರವರ ಆತ್ಮಚರಿತ್ರೆ)
- ಶಾಲಾ ಉಪಾಧ್ಯಾಯಿನಿಯೊಬ್ಬಳ ದಿನಚರಿ (೧೯೬೨)
(ಮೂಲ: ಎಫ್.ವಿಗ್ದೊರೊವಾ ಅವರ ರಶಿಯನ್ ಭಾಷೆಯ ಇಂಗ್ಲಿಷ ಅನುವಾದ: ಡೈರಿ ಆಫ್ ಎ ಸ್ಕೂಲ ಟೀಚರ್)
- ರಕ್ಷಾಕವಚ (೧೯೬೩)
(ಮೂಲ: ಸರ್ ವಾಲ್ಟರ್ ಸ್ಕಾಟ್ ಬರೆದ ಕಾದಂಬರಿ: ದ ಟಾಲಿಸ್ಮಾನ್)
- ಐವಾನ್ ಹೊ (೧೯೬೩)
(ಮೂಲ: ಸರ್ ವಾಲ್ಟರ್ ಸ್ಕಾಟ್ ಬರೆದ ಕಾದಂಬರಿ: ಐವಾನ್ ಹೊ)
[ಬದಲಾಯಿಸಿ] ಸನ್ಮಾನ
- ಸೆಂಟ್ರಲ್ ಕಾಲೇಜು, ಬೆಂಗಳೂರು ಏರ್ಪಡಿಸಿದ
ಮುದ್ದಣ ಕವಿ ಸ್ಮಾರಕ ಕಥಾ ಸ್ಪರ್ಧೆಯಲ್ಲಿ ಆನಂದ ಬರೆದ ಕತೆಗೆ( ನಾವೂ ಹಾಗೆಯೆ) ಸ್ವರ್ಣಪದಕ ಬಹುಮಾನ.
- ಸಣ್ಣ ಕತೆ ಬರಹಗಾರರ ಸಂಘದ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಸಣ್ಣ ಕತೆಗಾರರ ಮೂರನೆಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ.