ಇನ್ಸಾಟ್-೪ಎ
From Wikipedia
ಇನ್ಸಾಟ್-೪ಎ' ಭಾರತದಇಸ್ರೋ ಸಂಸ್ಥೆ ನಿರ್ಮಿಸಿದ ೧೨ ವರ್ಷಗಳ ಕಾಲ ದೂರಸಂಪರ್ಕ ಸಂಬಂಧಿಸಿದ ಸೇವೆ ನೀಡುವ ಉಪಗ್ರಹ. ಭಾರತೀಯ ಕಾಲಮಾನುಸಾರ ೨೨ ಡಿಸೆಂಬರ್ ೨೦೦೫ ಗುರುವಾರ ಬೆಳಗ್ಗೆ ೪.೦೩ ಗಂಟೆಗೆ ಸರಿಯಾಗಿ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ಎರಿಯನ್ ೫ ಪೀಳಿಗೆಯ ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಗೊಂಡಿತು. ಸುಮಾರು ೩೦೮೦ ಕೆಜಿ ತೂಕದ ಈ ಉಪಗ್ರಹದಲ್ಲಿ ೧೨ ಕ್ಯೂಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಮತ್ತು ೧೨ ಸಿ ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿವೆ. ಈ ಉಪಗ್ರಹದಿಂದ ಡಿಟಿಎಚ್ ದೂರದರ್ಶನ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶೇಷಜ್ಞರ ಅಭಿಪ್ರಾಯ.