ಎಚ್.ಎಸ್.ವೆಂಕಟೇಶಮೂರ್ತಿ
From Wikipedia
ಡಾ| ಎಚ್.ಎಸ್.ವೆಂಕಟೇಶಮೂರ್ತಿ
ವೆಂಕಟೇಶಮೂರ್ತಿಯವರು ೧೯೪೪ ಜೂನ್ ೨೩ರಂದು ಶಿವಮೊಗ್ಗ ಜಿಲ್ಲೆಯ ಹೊದಿಗ್ಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಚಿಕ್ಕಂದಿನಿಂದಲೂ ಕಾವ್ಯರಚನೆಯಲ್ಲಿ ಆಸಕ್ತಿ ಹೊಂದಿದ ಇವರು ಮಲ್ಲಾಡಿಹಳ್ಳಿಯ ಜೂನಿಯರ್ ಕಾಲೇಜಿನಲ್ಲಿ, ತರುವಾಯ ಬೆಂಗಳೂರಿನ ಸೇಂಟ ಜೋಸೆಫ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡರು. ಇವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಂದರೆ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಇತ್ಯಾದಿಗಳಲ್ಲಿ ಕೃಷಿ ಮಾಡಿದ್ದಾರೆ ಹಾಗು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು, ಕನ್ನಡದಲ್ಲಿ ಕಥನ ಕವನಗಳು ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಪ್ರಕಟಗೊಂಡ ಕಾವ್ಯ ಸಾಹಿತ್ಯ( ಪ್ರಥಮ ಆವೃತ್ತಿಯ ವರ್ಷ):
- ಪರಿವೃತ್ತ(೧೯೬೮)
- ಬಾಗಿಲು ಬಡಿವ ಜನಗಳು(೧೯೭೧)
- ಮೊಖ್ತಾ(೧೯೭೪)
- ಸಿಂದಬಾದನ ಆತ್ಮಕಥೆ(೧೯೭೭)
- ಒಣ ಮರದ ಗಿಳಿಗಳು (೧೯೮೧)
- ಮರೆತ ಸಾಲುಗಳು(೧೯೮೩)
- ಸೌಗಂಧಿಕ(೧೯೮೪)
- ಇಂದುಮುಖಿ(೧೯೮೫)
- ಹರಿಗೋಲು(೧೯೮೫)
- ವಿಸರ್ಗ(೧೯೮೮)
- ಎಲೆಗಳು ನೂರಾರು(೧೯೮೯)
- ಅಗ್ನಿಸ್ತಂಭ(೧೯೯೦)
- ಎಷ್ಟೊಂದು ಮುಖ(೧೯೯೦)
- ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
- ವಿಮುಕ್ತಿ(೧೯೯೮)
- ಭೂಮಿಯೂ ಒಂದು ಆಕಾಶ(೨೦೦೦)
- ಮೂವತ್ತು ಮಳೆಗಾಲ(೨೦೦೧)
[ಬದಲಾಯಿಸಿ] ಪ್ರಕಟಗೊಂಡ ಕಥಾ ಸಾಹಿತ್ಯ
- ಬಾನಸವಾಡಿಯ ಬೆಂಕಿ(೧೯೮೦)
- ಪುಟ್ಟಾರಿಯ ಮತಾಂತರ(೧೯೯೦);
[ಬದಲಾಯಿಸಿ] ಕಾದಂಬರಿ
- ತಾಪಿ(೧೯೭೮)
[ಬದಲಾಯಿಸಿ] ಸಾಹಿತ್ಯಚರಿತ್ರೆ
- ಕೀರ್ತನಕಾರರು(೧೯೭೫)
[ಬದಲಾಯಿಸಿ] ವಿಮರ್ಶೆ
- ನೂರು ಮರ ನೂರು ಸ್ವರ(೧೯೮೩)
- ಮೇಘದೂತ(೧೯೮೯)
- ಕಥನ ಕವನ(೧೯೯೦)
- ಆಕಾಶದ ಹಕ್ಕು(೨೦೦೧)
[ಬದಲಾಯಿಸಿ] ಅನುಭವ ಕಥನ
- ಕ್ರಿಸ್ಮಸ್ ಮರ(೨೦೦೦)
[ಬದಲಾಯಿಸಿ] ಸಂಪಾದನೆ
- ಶತಮಾನದ ಕಾವ್ಯ(೨೦೦೧)
[ಬದಲಾಯಿಸಿ] ನಾಟಕಗಳು
- ಹೆಜ್ಜೆಗಳು(೧೯೮೧)
- ಒಂದು ಸೈನಿಕ ವೃತ್ತಾಂತ(೧೯೯೩)
- ಕತ್ತಲೆಗೆ ಎಷ್ಟು ಮುಖ(೧೯೯೯)
- ಚಿತ್ರಪಟ(೧೯೯೯)
- ಉರಿಯ ಉಯ್ಯಾಲೆ(೧೯೯೯)
- ಅಗ್ನಿವರ್ಣ(೧೯೯೯)
- ಸ್ವಯಂವರ(ಅಪ್ರಕಟಿತ);
[ಬದಲಾಯಿಸಿ] ಅನುವಾದ
- ಋತುವಿಲಾಸ( ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)
[ಬದಲಾಯಿಸಿ] ಪ್ರಬಂಧ
- ಕನ್ನಡದಲ್ಲಿ ಕಥನ ಕವನಗಳು( ಪಿ. ಎಚ್.ಡಿ ಗಾಗಿ ಪ್ರಬಂಧ:೧೯೮೭)
[ಬದಲಾಯಿಸಿ] ಮಕ್ಕಳ ಸಾಹಿತ್ಯ
[ಬದಲಾಯಿಸಿ] ಚರಿತ್ರೆ
- ಸಿ.ವಿ.ರಾಮನ್(೧೯೭೪)
- ಹೋಮಿ ಜಹಾಂಗೀರ ಭಾಭಾ(೧೯೭೫)
- ಸೋದರಿ ನಿವೇದಿತಾ(೧೯೯೫)
- ಬಾಹುಬಲಿ(೨೦೦೦)
[ಬದಲಾಯಿಸಿ] ಕಾದಂಬರಿ
- ಅಮಾನುಷರು(೧೯೮೦)
- ಕದಿರನ ಕೋಟೆ(೧೯೮೫)
- ಅಗ್ನಿಮುಖಿ(೧೯೮೬)
[ಬದಲಾಯಿಸಿ] ಕವನಗಳು
- ಹಕ್ಕಿಸಾಲು(೧೯೮೭)
- ಹೂವಿನ ಶಾಲೆ(೧೯೯೭)
- ಸೋನಿ ಪದ್ಯಗಳು(೨೦೦೧)
[ಬದಲಾಯಿಸಿ] ಪ್ರಶಸ್ತಿಗಳು
- ೧೯೭೭: ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
- ೧೯೭೮: ತಾಪಿ- ದೇವರಾಜ ಬಹಾದ್ದೂರ ಪ್ರಶಸ್ತಿ
- ೧೯೮೦: ಅಮಾನುಷರು- “ ಸುಧಾ” ಬಹುಮಾನ
- ೧೯೮೧: ಹೆಜ್ಜೆಗಳು-“ ರಂಗಸಂಪದ” ಬಹುಮಾನ
- ೧೯೮೫: ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
- ೧೯೮೫: ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
- ೧೯೮೬: ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
- ೧೯೮೮: ಋತುವಿಲಾಸ: ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ
- ೧೯೯೦: ಎಷ್ಟೊಂದು ಮುಗಿಲು: ಬಿ.ಎಚ್.ಶ್ರೀಧರ ಪ್ರಶಸ್ತಿ
- ೧೯೯೩: ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
- ೧೯೯೭: ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
- ಸ್ವಯಂವರ(ಅಪ್ರಕಟಿತ)- “ ಉಡುಪಿ ರಂಗಭೂಮಿ” ಪುರಸ್ಕಾರ