ಓಂಕಾರ ಪ್ರಸಾದ್ ನಯ್ಯರ್
From Wikipedia
ಒ.ಪಿ.ನಯ್ಯರ್ (೧೯೨೬-೨೦೦೭) ಪ್ರಸಿದ್ಧ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಒ.ಪಿ.ನಯ್ಯರ್ ಎಂದೇ ಪ್ರಸಿದ್ಧರು.
ಭಾರತದ ಅವಿಭಾಜ್ಯ ಅಂಗವಾಗಿದ್ದ, ಈಗ ಪಾಕಿಸ್ತಾನದಲ್ಲಿರುವ ಲಾಹೋರ್‌ನಲ್ಲಿ ೧೯೨೬ರಲ್ಲಿ ನಯ್ಯರ್ ಜನಿಸಿದರು. ಭಾರತ ವಿಭಜನೆಗೊಂಡ ನಂತರ ಅಮೃತಸರಕ್ಕೆ ಅವರ ಕುಟುಂಬ ವಲಸೆ ಬಂತು. ೧೯೪೯ರಲ್ಲಿ ನಯ್ಯರ್ ಮುಂಬೈಗೆ ಬಂದರು. ಇದಕ್ಕೂ ಮುನ್ನ ಅವರು ಅಮೃತಸರದ ಆಕಾಶವಾಣಿಯಲ್ಲಿ ಉದ್ಯೋಗಿಯಾಗಿದ್ದರು.
ಕನೀಜ್ ಚಿತ್ರಕ್ಕೆ ೧೯೪೯ರಲ್ಲಿ ಸಂಗೀತ ನೀಡುವ ಮೂಲಕ ಇವರ ಸಂಗೀತ ವೃತ್ತಿ ಜೀವನ ಆರಂಭವಾಯಿತು. ಆಶಾ ಭೋಂಸ್ಲೆ, ಮಹಮದ್ ರಫಿ,ಗೀತಾದತ್ ಮುಂತಾದವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು.
[ಬದಲಾಯಿಸಿ] ಒ.ಪಿ.ನಯ್ಯರ್ ಸಂಗೀತ ನೀಡಿದ ಚಿತ್ರಗಳು
- ಬಾಜ್
- ಆರ್‌ಪಾರ್
- ಮಿಸ್ಟರ್ ಆಂಡ್ ಮಿಸೆಸ್ ೫೫