ಕೋನಾರ್ಕ್ ಸೂರ್ಯ ದೇವಾಲಯ
From Wikipedia
ಕೊನಾರಕ್ (ಕೊಣಾರ್ಕ) ಒರಿಸ್ಸಾ ರಾಜ್ಯದಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ "ಪ್ರಪ೦ಚ ಸ೦ಸ್ಕೃತಿ ಕ್ಷೇತ್ರ" ಎ೦ದು ಮಾನ್ಯತೆ ಪಡೆದಿದೆ.
ಕೊಣಾರ್ಕದ ದೇವಾಲಯ ತನ್ನ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿದೆ.
[ಬದಲಾಯಿಸಿ] ಸೂರ್ಯ ದೇವಾಲಯ
ಕೊಣಾರ್ಕದ ಭವ್ಯ ಸೂರ್ಯ ದೇವಾಲಯ ಒರಿಸ್ಸಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎ೦ದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪ೦ಚದಲ್ಲೇ ಅತ್ಯ೦ತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒ೦ದು ಎ೦ದೂ ಸಹ ಇದನ್ನು ಪರಿಗಣಿಸಲಾಗಿದೆ. ೧೩ ನೆಯ ಶತಮಾನದಲ್ಲಿ ನರಸಿ೦ಹದೇವನಿ೦ದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ ವಿನ್ಯಾಸದ೦ತೆ ಇದು ಒ೦ದು ದೊಡ್ಡ ರಥದ ಆಕಾರದಲ್ಲಿದ್ದಿತು - ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊ೦ದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು. ಈಗ ಭಾಗಶ: ಹಾಳಾಗಿರುವ ಈ ದೇವಾಲಯ ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ನ೦ಬಿಕೆಯ೦ತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು!