ಜಗ್ಗೇಶ್
From Wikipedia
ಕನ್ನಡದ ಚಿತ್ರನಟ. ೧೯೮೦ರಲ್ಲಿ ಖಳ,ಹಾಸ್ಯ ಪಾತ್ರಗಳನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶ.
ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ.
ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.
ಉತ್ತಮ ಹಾಸ್ಯ ನಟರೂ ಆಗಿರುವ ಇವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಗುರುತಿಸಲ್ಪಡುತ್ತಾರೆ. ಇವರ ಸ್ವಂತ ಸ್ಥಳ, ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಮಾಯಸಂದ್ರ ಎಂಬ ಊರು. ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಲು ಬಯಸಿ, ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ವಿಜಯಿಯಾಗಲಿಲ್ಲ.
[ಬದಲಾಯಿಸಿ] ಜಗ್ಗೇಶ್ ಅಭಿನಯದ ಚಿತ್ರಗಳು
- ಇಬ್ಬನಿ ಕರಗಿತು
- ಭಂಡ ನನ್ನ ಗಂಡ
- ರಾಣಿ ಮಹಾರಾಣಿ
- ಬೇವು ಬೆಲ್ಲ
- ರೂಪಾಯಿ ರಾಜ
- ಸರ್ವರ್ ಸೋಮಣ್ಣ
- ಗಡಿಬಿಡಿ ಗಂಡ
- ಸೂಪರ್ ನನ್ ಮಗ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ರಾಮಕೃಷ್ಣ
- ಗಡಿಬಿಡಿ ಗಂಡ
- ಯಾರೆ ನೀನು ಚೆಲುವೆ
- ಆಗೋದೆಲ್ಲ ಒಳ್ಳೇದಕ್ಕೆ
- ರಣಧೀರ
- ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ
- ಬೊಂಬಾಟ್ ಹುಡುಗ
- ಗುಂಡನ ಮದುವೆ
- ಶಿವಣ್ಣ
- ಊರ್ವಶಿ ಕಲ್ಯಾಣ
- ರಾಯರ ಮಗ
- ಬೇಡ ಕೃಷ್ಣ ರಂಗಿನಾಟ
- ಇಂದ್ರನ ಗೆದ್ದ ನರೇಂದ್ರ
- ಪ್ರೇಮ ಸಿಂಹಾಸನ
- ಈಶ್ವರ್
- ಬಲ್ ನನ್ ಮಗ
- ಪಟ್ಟಣಕ್ಕೆ ಬಂದ ಪುಟ್ಟ
- ರಂಗಣ್ಣ
- ಅಣ್ಣ ಅಂದ್ರೆ ನಮ್ಮಣ್ಣ
- ಮಾತಿನ ಮಲ್ಲ
- ಜಯದೇವ್
- ಜಗತ್ ಕಿಲಾಡಿ
- ಮಾರಿಕಣ್ಣು ಹೋರಿಮ್ಯಾಗೆ
- ಕುಬೇರ
- ದ್ರೋಣ
- ನನ್ನಾಸೆಯ ಹೂವೆ
- ಪಟೇಲ
- ಸುಲ್ತಾನ್
- ಮುಂದೈತೆ ಊರಹಬ್ಬ
- ಆಹಾ ನನ್ನ ಮದುವೆಯಂತೆ
- ಭಂಡ ಅಲ್ಲ ಬಹಾದ್ದೂರ್
- ಕಿಲಾಡಿ
- ಶುಕ್ರದೆಸೆ
- ಜಿತೇಂದ್ರ
- ರುಸ್ತುಂ
- ವಂಶಕ್ಕೊಬ್ಬ
- ಮೇಕಪ್
- ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ
- ಕಾಸು ಇದ್ದೋನೆ ಬಾಸು
- ಹುಚ್ಚನ ಮದುವೇಲಿ ಉಂಡವನೇ ಜಾಣ
- ಮಿಸ್ಟರ್ ಬಕ್ರಾ
- ಮಠ
- ತೆನಾಲಿ ರಾಮ