ಟಿ.ವಿ.ಸಿಂಗ್ ಠಾಕೂರ್
From Wikipedia
೧೯೧೧ರಲ್ಲಿ ಜನಿಸಿದ ವಿಠಲ್‌ಸಿಂಗ್ ಚಿತ್ರರಂಗದಲ್ಲಿ ಟಿ.ವಿ.ಸಿಂಗ್ ಠಾಕೂರ್ ಎಂದೇ ಪರಿಚಿತ.ಜೆಮಿನಿ ಸ್ಟುಡಿಯೋದಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಚಿತ್ರ ನಿರ್ದೇಶಕನಾಗುವ ಅವಕಾಶ ಒದಗಿ ಬಂದದ್ದು ಹೀಗೆ.ಮಹಾತ್ಮ ಪಿಕ್ಚರ್ಸ್ ಸಂಸ್ಥೆ ಇಬ್ಭಾಗವಾದಾಗ ಅದರಿಂದ ಹೊರಗೆ ಬಂದ ಜಿ.ಎನ್.ವಿಶ್ವನಾಥಶೆಟ್ಟರು ಸ್ವತಂತ್ರವಾಗಿ ಚಿತ್ರ ನಿರ್ಮಿಸಲು ನಿರ್ಧರಿಸಿದರು."ನಲ್ಲತಂಗಳ್" ಎಂಬ ಚಿತ್ರದ ಕಥೆಯನ್ನು ಆಧರಿಸಿದ ಸೋದರಿ ಚಿತ್ರದ ನಿರ್ದೇಶನದ ಜವಾಬ್ದಾರಿ ವಿಠಲ್‌ಸಿಂಗ್‌ರವರಿಗೆ ಬಂತು.ತಮ್ಮ ಈ ಮೊದಲ ಚಿತ್ರದ ನಿರ್ದೇಶನಕ್ಕೆ ಟಿ.ವಿ.ಸಿಂಗ್ ಠಾಕೂರ್ ಎಂದು ಹೆಸರು ಬದಲಿಸಿಕೊಂಡರು.ಮುಂದೆ ಈ ಹೆಸರೇ ಚಿತ್ರರಂಗದಲ್ಲಿ ಖಾಯಂ ಆಗಿ ಉಳಿಯಿತು. ಪ್ರಯೋಗಶೀಲ ನಿರ್ದೇಶಕರಾಗಿದ್ದ ಇವರ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲುಗಳಾಗಿವೆ.
[ಬದಲಾಯಿಸಿ] ಇವರ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು
- ಹರಿಭಕ್ತ
- ಓಹಿಲೇಶ್ವರ
- ಜಗಜ್ಯೋತಿ ಬಸವೇಶ್ವರ
- ಕರುಣೆಯೇ ಕುಟುಂಬದ ಕಣ್ಣು - ೧೯೬೨ರಲ್ಲಿ ಕೃಷ್ನಮೂರ್ತಿ ಪುರಾಣಿಕರ ಕಾದಂಬರಿ ಆಧರಿಸಿ ನಿರ್ದೇಶಿಸಿದ್ದು.
- ಚಂದವಳ್ಳಿಯ ತೋಟ - ತರಾಸು ಕಾದಂಬರಿ ಆಧಾರಿತ.
- ಮಂತ್ರಾಲಯ ಮಹಾತ್ಮೆ
- ಭಾರತರತ್ನ
- ಕುಲವಧು
- ಹಸಿರು ತೋರಣ
- ಕವಲೆರಡು ಕುಲವೊಂದು
- ಭಾಗೀರಥಿ
- ಹೊಂಬಿಸಿಲು
- ಹೇಮರೆಡ್ಡಿ ಮಲ್ಲಮ್ಮ
ಒಟ್ಟಾರೆ ೨೭ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು
ಚಂದವಳ್ಳಿಯ ತೋಟ ಚಿತ್ರಕ್ಕೆ ರಾಷ್ಟ್ರಪತಿಗಳ ಬೆಳ್ಳಿ ಪದಕ ಲಭಿಸಿದೆ.
[ಬದಲಾಯಿಸಿ] ನಿಧನ
ಇವರು ೧೯೯೫ರಲ್ಲಿ ಮದ್ರಾಸಿನಲ್ಲಿ ನಿಧನರಾದರು.