ಬಿ.ಕೆ.ಎಸ್.ಅಯ್ಯಂಗಾರ್
From Wikipedia
ಬಿ.ಕೆ.ಎಸ್.ಅಯ್ಯಂಗಾರ್ ಇವರು ೧೯೧೮ರಲ್ಲಿ ಬೆಳ್ಳೂರಿನಲ್ಲಿ ಜನಿಸಿದರು. ಇವರು ೯ನೆಯ ವರ್ಷದವರಿದ್ದಾಗ ಇವರ ತಂದೆ ತಿರಿಕೊಂಡರು. ಸಂಸಾರಭಾರ ಇವರ ಮೇಲೆ ಬಿದ್ದಾಗಲೆ,ಇವರಿಗೆ ಮಲೇರಿಯಾ ಹಾಗು ಟೈಫಾಯ್ಡ್ ಬಾಧಿಸಿದ್ದಲ್ಲದೆ ಕ್ಷಯರೋಗ ಬೇರೆ ಅಂಟಿಕೊಂಡಿತು. ಇದರ ಬಿಡುಗಡೆಗಾಗಿ ೧೫ನೆಯ ವಯಸ್ಸಿನಲ್ಲಿ ಪ್ರಸಿದ್ಧ ಯೋಗಶಿಕ್ಷಕ ತಿರುಮಲೈ ಕೃಷ್ಣಮಾಚಾರ್ಯರ ಬಳಿ ಯೋಗಾಭ್ಯಾಸ ಕೈಕೊಂಡರು. ೧೯೫೨ರಲ್ಲಿ ಪ್ರಸಿದ್ಧ ಪಿಟೀಲುವಾದಕ ಯಹೂದಿ ಮೆನುಹಿನ್ ಇವರಿಂದ ಯೋಗ ಕಲಿತರು. ಆ ಬಳಿಕ ಮೆನುಹಿನ್ ಜೊತೆಗೆ ಯುರೋಪ್ ಹಾಗು ಅಮೆರಿಕೆಗಳಿಗೆ ಭೇಟಿ ನೀಡಿ ಯೋಗಪ್ರಸಾರ ಮಾಡಿದರು. ೧೯೬೬ರಲ್ಲಿ Light on Yoga ಕೃತಿ ರಚಿಸಿದರು. ಇದು ವಿಶ್ವಖ್ಯಾತಿ ಪಡೆಯಿತು. ಸದ್ಯಕ್ಕೆ ಪುಣೆ ಇವರ ಕಾರ್ಯಕ್ಷೇತ್ರ.