ಭೀಷ್ಮ
From Wikipedia
ಭೀಷ್ಮ ಶಾಂತನು ಮತ್ತು ಗಂಗೆಯರ ಪುತ್ರ.ಶಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ.ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ.