ಮಹಾಸಾಗರ
From Wikipedia
ಪ್ರಪಂಚದ ಇಡೀ ಉಪ್ಪುನೀರಿನ ಸಮೂಹ ಅಂತರಸಂಪರ್ಕವನ್ನು ಹೊಂದಿದೆ. ಈ ಸಮೂಹವು ಮಧ್ಯೆ ಮಧ್ಯೆಯಲ್ಲಿ ಖಂಡಗಳಿಂದ ಭಾಗಶಃ ಐದು ಉಪಸಮೂಹಗಳಾಗಿ ಬೇರ್ಪಟ್ಟಿದೆ. ಈ ಉಪಸಮೂಹಗಳೇ ಮಹಾಸಾಗರಗಳು.
ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದಾಗಿ ಮಹಾಸಾಗರಗಳು ಈ ರೀತಿ ಇವೆ:
[ಬದಲಾಯಿಸಿ] ಅಂಕಿ-ಅಂಶಗಳು
ಇಡೀ ಜಲಸಮೂಹದ ವಿಸ್ತೀರ್ಣ ೩೬೨ಮಿಲಿಯನ್ ಚದುರ ಕಿ.ಮಿ.ಗಳಷ್ಟು. ಭೂಮಿಯ ಮೇಲ್ಮೈನ ಸುಮಾರು ೪೦%ವನ್ನು ಆವರಿಸಿರುವ ಮಹಾಸಮುದ್ರಗಳು ಸರಾಸರಿ ೩,೭೧೧ ಮೀಟರ್ ಆಳವನ್ನು ಹೊಂದಿದೆ. ಇಲ್ಲಿರುವ ನೀರಿನ ಪ್ರಮಾಣ ಸುಮಾರು ೧,೩೪೦ ಮಿಲಿಯನ್ ಘನ ಕಿ.ಮಿ.ಗಳಷ್ಟು ಇದ್ದು ಇದು ಭೂಮಿಯ ೦.೦೨೩% ಭಾರವಾಗಿದೆ.
ಪೆಸಿಫಿಕ್ ಮಹಾಸಾಗರದಲ್ಲಿರುವ ಪ್ರಪಂಚದ ಅತಿ ಆಳದ ಪ್ರದೇಶ ಮರಿಯಾನಾ ಕಂದಕ ೧೦,೯೨೩ ಮೀಟರ್ (ಸುಮಾರು ೧೧ ಕಿ.ಮಿ.) ಆಳದಲ್ಲಿದೆ.
ವರ್ಗಗಳು: ಚುಟುಕು | ಜಲಸಮೂಹಗಳು | ಮಹಾಸಾಗರಗಳು