ಮೌಲಾನ ಅಬುಲ್ ಕಲಮ್ ಆಜಾದ್
From Wikipedia
ಅಬುಲ್ ಕಲಮ್ ಗುಲಾಮ್ ಮುಹಿಯುದ್ದೀನ್ (ನವೆಂಬರ್ ೧೧, ೧೮೮೮ - ಫೆಬ್ರುವರಿ ೨೨, ೧೯೫೮) ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮುಂದಾಳುಗಳಲ್ಲಿ ಒಬ್ಬರು. ಯೌವನದಲ್ಲಿ ಕವಿ, ಲೇಖಕ, ಪತ್ರಕರ್ತರಾಗಿದ್ದ ಇವರು ಆಜಾದ್ (ಸ್ವತಂತ್ರ) ಎಂಬ ಕಾವ್ಯನಾಮವನ್ನು ಉಪಯೋಗಿಸುತ್ತಿದ್ದರು. ಇಸ್ಲಾಂ ಧರ್ಮದ ಆಳವಾದ ಜ್ಞಾನ ಹೊಂದಿದ್ದರಿಂದ ಮೌಲಾನ ಬಿರುದನ್ನು ಹೊಂದಿದ್ದರು. ಹೀಗಾಗಿ ಒಟ್ಟಾಗಿ ಜನಪ್ರಿಯವಾಗಿ ಮೌಲಾನ ಅಬುಲ್ ಕಲಮ್ ಆಜಾದ್ ಎಂದು ಕರೆಯಲ್ಪಟ್ಟರು.