ವಲಸೆ
From Wikipedia
ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ವಲಸೆ ಹೋಗುವುದು ಎನ್ನಲಾಗುತ್ತದೆ.
ವಲಸೆ ಹೋಗುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಪಕ್ಷಿಗಳೂ ವಲಸೆ ಹೋಗುತ್ತವೆ. ಕೇವಲ ಆಹಾರಕ್ಕಾಗಿ, ಜೀವನಕ್ಕಾಗಿ ಅಲ್ಲ, ಸಂತಾನೋತ್ಪತ್ತಿಗೆ, ಇತರ ಜೀವಿಗಳ ಉಪಟಳದಿಂದ ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಮತ್ತು ವಾತಾವರಣ ವೈಪರೀತ್ಯ ಎದುರಿಸಲಾಗದೆ ವಲಸೆ ಹೋಗುತ್ತವೆ.
ಆರ್ಕಟಿಕ್, ಗೋಲ್ಡ್ನ್ ಸ್ಪೂನ್ ಬಿಲ್ , ಬ್ರಿಟನ್ ದೇಶದ ಸ್ವಾಲೋ ಮತ್ತು ಹೌಸ್ ಮಾರ್ಟಿನ್ ಪಕ್ಷಿಗಳು ಮುಂತಾದವು ವಲಸೆ ಹೋಗುವ ಪಕ್ಷಿಗಳ ಸಾಲಿನಲ್ಲಿ ಪ್ರಮುಖವು. ಇವು ಉತ್ತರ ಯೂರೋಪಿನಿಂದ ಸಾವಿರಾರು ಕಿಲೋಮೀಟರ್ ದೂರದ ದಕ್ಷಿಣ ಭಾಗದ ಆಫ್ರಿಕಾಕ್ಕೆ ವಲಸೆ ಬರುತ್ತವೆ. ಅದೇ ರೀತಿ ಆಫ್ರಿಕಾದ ಕೆಲ ಪಕ್ಷಿಗಳು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಲೇಶಿಯಾಕ್ಕೆ ವಲಸೆ ಹೋಗುತ್ತವೆ.