ಸುನಿಲ್ ದತ್
From Wikipedia
ಸುನಿಲ್ ದತ್ (ಜೂನ್ ೬, ೧೯೨೯ – ಮೇ ೨೫, ೨೦೦೫) ಭಾರತೀಯ ನಟ, ರಾಜಕಾರಣಿ. ಬಾಲಿವುಡ್ ಎಂದೇ ಖ್ಯಾತವಾದ ಹಿಂದೀ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು.
ಪರಿವಿಡಿ |
[ಬದಲಾಯಿಸಿ] ಜೀವನ
೧೯೨೯ರಲ್ಲಿ ಖರ್ಡ್ ಹಳ್ಳಿಯಲ್ಲಿ (ಇಂದಿನ ಪಾಕಿಸ್ತಾನ, ಅಂದಿನ ಭಾರತ) ಹುಟ್ಟಿದ ಇವರು ೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ ಹುಟ್ಟೂರನ್ನು ತೊರೆದರು. ಇವರು ವಿದ್ಯಾಭ್ಯಾಸ ಮಾಡಿದ್ದು ಮುಂಬೈನ ಜಯ್ ಹಿಂದ್ ಕಾಲೇಜಿನಲ್ಲಿ.
೧೧-೦೩-೧೯೫೮ರಂದು ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದ ತಾರೆ ನರ್ಗಿಸ್ ರವರನ್ನು ಮದುವೆಯಾದರು. ಇವರ ಮಗ ಸಂಜಯ್ ದತ್ ಕೂಡ ಬಾಲಿವುಡ್ ತಾರೆ. ಇವರು ೨೫-೦೫-೨೦೦೫ರಂದು ಬಾಂದ್ರಾ, ಮುಂಬೈನಲ್ಲಿ ಹೃದಯಾಘಾತದಿಂದ ನಿದ್ರೆಯಲ್ಲಿಯೇ ಮರಣ ಹೊಂದಿದರು
[ಬದಲಾಯಿಸಿ] ಬಾಲಿವುಡ್
ಆಕಾಶವಾಣಿಯಲ್ಲಿ ಕೆಲಸ ಪ್ರಾರಂಭಿಸಿದ ಇವರು, ಹಿಂದಿ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ೧೯೫೬ರ ಹೊತ್ತಿಗೆ ಯಶಸ್ವಿ ನಟರಾದರು.
[ಬದಲಾಯಿಸಿ] ರಾಜಕೀಯ
೧೯೮೪ರಲ್ಲಿ ಇವರು ಕಾಂಗ್ರೆಸ್ (ಐ) ಪಕ್ಷವನ್ನು ಸೇರಿದರು, ಹಾಗೂ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಬಂದರು.
[ಬದಲಾಯಿಸಿ] ಸಿನೆಮಾಗಳು
- ರೈಲ್ವೆ ಪ್ಲಾಟ್ ಫಾರ್ಮ್
- ಏಕ್ ಹೀ ರಿಷ್ತಾ (೧೯೫೬)
- ಮದರ್ ಇಂಡಿಯಾ (ಭಾರತ ಮಾತೆ) (೧೯೫೬)
- ಸಾಧನಾ (೧೯೫೮)
- ಸುಜಾತಾ (೧೯೫೯)
- ಮೇ ಚುಪ್ ರಹೂಂಗೀ (೧೯೬೨)
- ಗುಮ್ರಾಹ್ (೧೯೬೩)
- ಮುಜೆ ಜೀನೇ ದೋ (೧೯೬೩)
- ಯೇ ರಾಸ್ತೇ ಹೆ ಪ್ಯಾರ್ ಕೇ (೧೯೬೩)
- ಯಾದೇನ್ (೧೯೬೪)
- ವಕ್ತ್ (೧೯೬೫)
- ಹಮ್ರಾಝ್ (೧೯೬೭)
- ಮೆಹೆರ್ಬಾ (೧೯೬೭)
- ಮಿಲನ್ (೧೯೬೭)
- ಪಡೋಸನ್ (೧೯೬೮)
- ರೇಶ್ಮಾ ಔರ್ ಶೇರಾ (೧೯೭೧)
- ಝಕ್ಮೀ (೧೯೭೫)
- ಜಾನೀ ದುಶ್ಮನ್ (೧೯೭೮)
- ಮುನ್ನಾಭಾಯಿ ಎಂ ಬೀ ಬಿ ಎಸ್ (೨೦೦೩)
ಸಮಕಾಲೀನ ನಟರು: ನರ್ಗೀಸ್, ಜಾನಿ ವಾಲ್ಕರ್, ವಹೀದಾ ರಹ್ಮಾನ್, ಸಾಧನಾ, ಮೀನಾ ಕುಮಾರಿ, ನೂತನ್