ಸ.ಜ.ನಾಗಲೋಟಿ ಮಠ
From Wikipedia
ಸ ಜ ನಾಗಲೋಟಿ ಮಠರವರು ಕರ್ನಾಟಕದ ಖ್ಯಾತ ವೈದ್ಯರು ಹಾಗು ಸಾಹಿತಿಗಳು. ಸಜನಾ ಎಂದು ಖಾ್ಯತರಾಗಿರುವ ಇವರ ಪೂರ್ಣ ಹೆಸರು ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ.
೨೦ ಜುಲೈ,೧೯೪೦ರಲ್ಲಿ ಗದಗದಲ್ಲಿ ಜನಿಸಿದ ನಾಗಲೋಟಿಮಠರವರಿಗೆ ಜನಿಸಿದಾಗ ಸದಾಶಿವಯ್ಯ ಎಂದು ಹೆಸರಿಡಲಾಯಿತು. ಇವರ ತಂದೆ ಜಂಬಯ್ಯನವರು ನರಗುಂದ ತಾಲೂಕಿನ ಶಿರೋಳ ಗ್ರಾಮದವರು.
ನಾಗಲೋಟಿಮಠರವರು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣವನ್ನು ಸದಾಶಿವ ಬನಹಟ್ಟಿಯಲ್ಲಿ ಪೂರೈಸಿದರು. ವೈದ್ಯ ಶಿಕ್ಷಣವನ್ನು ಇವರು ಹುಬ್ಬಳ್ಳಿಯ ಕೆ.ಎಂ.ಸಿ ಯಲ್ಲಿ ಪೂರೈಸಿದರು ಹಾಗು ವಿಶ್ವವಿದ್ಯಾಲಯಕ್ಕೆ ಪ್ರಥಮ ರಾಂಕ್ ಗಳಿಸಿದರು. ನಾಗಲೋಟಿಮಠರವರು ಹುಬ್ಬಳ್ಳಿಯ ಕಿಮ್ಸನ ಪ್ರಥಮ ಅಧ್ಯಕ್ಷರಾಗಿದ್ದರು. ಇವರು ಭಾರತದಲ್ಲೇ ಅತಿ ದೊಡ್ಡ ದೇಹದ ಹರಳುಗಳ ವಸ್ತು ಸಂಗ್ರಹಾಲಯವನ್ನು ಬಿಜಾಪುರದಲ್ಲಿ ಸ್ಥಾಪಿಸಿದರು. ಬೆಳಗಾವಿಯಲ್ಲಿ ಇವರು ಸ್ಥಾಥಪಿಸಿರುವ ಪ್ಯಾಥಾಲಜಿ ಮ್ಯೂಸಿಯಂ ಕೋಡ ಪ್ರಸಿದ್ದವಾಗಿದೆ. ಇವರು ದಿಕೂ್ಸಚಿ ಮಾಸಪತ್ರಿಕೆಯ ಗೌರವ ಸಲಹೆಗಾರರಾಗಿದ್ದರು.