ಹೇಮಂತ್
From Wikipedia
[ಬದಲಾಯಿಸಿ] ಹೇಮಂತ್ ಕುಮಾರ್
ಹೇಮಂತ್ ಕುಮಾರ್ ಪ್ರೀತ್ಸೆ ಚಿತ್ರದ "ಪ್ರೀತ್ಸೆ ಪ್ರೀತ್ಸೆ" ಹಾಡಿನಿಂದ ಜನಪ್ರಿಯರಾದಂಥವರು. ಇವರು ಹಂಸಲೇಖರ ಗರಡಿಯಲ್ಲೇ ಪಳಗಿದವರು. ಪ್ರೀತ್ಸೆ ಚಿತ್ರದ ಹಾಡು ಜನಪ್ರಿಯರಾಗುತ್ತಿದ್ದಂತೆ, ಇವರಿಗೆ ಬಹಳ ದೊಡ್ಡ ಅವಕಾಶಗಳು ಹುಡುಕಿಕೊಂಡು ಬಂದಿವೆ. ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ. ಮನೋಹರ ಮತ್ತಿತರರ ಜೊತೆ ಕೆಲಸ ಮಾಡಿದ ಅನುಭವ ಇದೆ.
ಇವರು ಗಾಯಕಿ ನಂದಿತಾ ಅವರ ಜೊತೆ ಒಂದು ತಂಡವನ್ನು ಕಟ್ಟಿಕೊಂಡು ಸ್ಟೇಜ್ ಶೋ ಗಳನ್ನು ನೀಡುತ್ತಾರೆ. ಇತ್ತೀಚಿಗೆ ಹೊಸ ನಾಯಕರ ಹಾಡುಗಳಿಗೆ ಸಂಗೀತ ನಿರ್ದೇಶಕರು ಇವರ ಧ್ವನಿಯನ್ನೆ ಸೂಚಿಸುವುದರಿಂದ, ಇವರು ಹಾಡಿದ ಬಹಳ ಹಾಡುಗಳು ಹೊಸ ನಟರ ಚಿತ್ರಗಳು.
ಇವರು ಆಕಾಶವಾಣಿ ಗಾಯಕಿ ____ ಅವರ ಮಗ.