ಟೆಂಪ್ಲೇಟು ಚರ್ಚೆ:Infobox ಚಿತ್ರಗೀತೆ
From Wikipedia
ಸಾಕಷ್ಟು ಪ್ರಮಾಣದ ಚಿತ್ರಗಳಲ್ಲಿ ಕೇವಲ ಒಬ್ಬರೇ "ಚಿತ್ರಸಾಹಿತಿ" ಇರುತ್ತಾರೆ. ಅದರಲ್ಲೂ ಚಿ.ಉದಯಶಂಕರ್ ಮತ್ತು ಹಂಸಲೇಖ ಬರೆದಿರುವ ಹಾಡುಗಳಿರುವ ಬಹುತೇಕ ಚಿತ್ರಗಳಲ್ಲಿ ಎಲ್ಲಾ ಹಾಡುಗಳೇ ಒಬ್ಬರದೇ ಆಗಿರುತ್ತದೆ. ಹೀಗಿರಬೇಕಾದರೆ, ಪ್ರತೀ ಗೀತೆಯ ಪಕ್ಕದಲ್ಲಿ ಸಾಹಿತಿಯ ಹೆಸರು ಬರೆಯುವ ಕ್ರಮವನ್ನು Optional ಮಾಡಬಹುದು. ಹಾಗೆಯೇ ಒಬ್ಬ ಸಾಹಿತಿಯ ಹೆಸರನ್ನು ಮಾತ್ರ ಬರೆಯುವುದನ್ನು Optional ಮಾಡಬಹುದು. ಈ ರೀತಿ ಈ Infoboxಅನ್ನು ಮಾರ್ಪಡಿಸೋಣವೇ ? ಈ ರೀತಿ ಬಳಸಿದ ಚಿತ್ರಗೀತೆ ಆಲ್ಬಂಗಳು ಕೆಳಕಂಡಂತೆ ಕಂಡರೆ ಚೆನ್ನಾಗಿರುತ್ತದೆ.
ಪ್ರೇಮಲೋಕ
ಸಂಗೀತ: ಹಂಸಲೇಖ
ಚಿತ್ರಸಾಹಿತಿ: ಹಂಸಲೇಖ
ಹಾಡು_೧...
ಹಾಡು_೨...
ಹಾಡು_೩...
ಹಾಡು_೪...
ಗಾನಯೋಗಿ ಪಂಚಾಕ್ಷರಿ ಗವಾಯಿ
ಸಂಗೀತ: ಹಂಸಲೇಖ
ಹಾಡು_೧...../ರಚನೆ: ಹಂಸಲೇಖ
ಹಾಡು_೨...../ರಚನೆ: ತಾನ್ಸೇನ್ ಚೀಜ್
ಹಾಡು_೩...../ರಚನೆ: ಪುರಂದರದಾಸರು
(ಸಹಿ ನೆನಪಿಸಿದ್ದಕ್ಕೆ ವಂದನೆಗಳು) -ಹಂಸವಾಣಿದಾಸ ೦೪:೧೧, ೬ June ೨೦೦೬ (UTC)
- ಚರ್ಚಾಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ದಯವಿಟ್ಟು ಮರೆಯಬೇಡಿ.
- ಸಮಂಜಸವಾದ ಸಲಹೆ. Infobox ಅನ್ನು ಮಾರ್ಪಾಡಿಸಿ, ಪ್ರಯತ್ನಿಸಿ ನೋಡಿ. ಒಟ್ಟಿನಲ್ಲಿ ಯಾವ ಗೀತೆಗಳಿಗೆ ಯಾರು ರಚನೆಕಾರರು, ಯಾರು ಹಾಡುಗಾರರು ಎಂದು ಸ್ಪಷ್ಟವಾಗಿ, ಯಾವುದೇ ಗೊಂದಲಗಳಿಲ್ಲದೆ ತಿಳಿಯಬೇಕಷ್ಟೆ. ಧನ್ಯವಾದಗಳು - ಮನ | Mana ೦೩:೫೭, ೬ June ೨೦೦೬ (UTC)
-
- ಒಬ್ಬರೇ ಸಾಹಿತಿ ಇದ್ದಲ್ಲಿ ಮಾತ್ರ ಒಂದೇ ಕಡೆ ಹಾಕುವೆ ಎಂದೇ, ಇಬ್ಬರು ಇದ್ದರೂ ಪ್ರತಿ ಹಾಡಿನ ಪಕ್ಕದಲ್ಲಿ ಬರೆಯಬಹುದು. -ಹಂಸವಾಣಿದಾಸ ೦೪:೧೧, ೬ June ೨೦೦೬ (UTC)
[ಬದಲಾಯಿಸಿ] ಚಿತ್ರಗೀತೆಗಳ ಸಾಹಿತ್ಯದ ಸಾಲುಗಳನ್ನು ಸಂಯೋಜಿಸುವುದು ಹೇಗೆ?
ಪಟ್ಟಿ (ಟೇಬಲ್) ರೀತಿಯಲ್ಲಿ ಇರುವ ಈ ಟೆಂಪ್ಲೇಟಿನಲ್ಲಿ ಚಿತ್ರಗೀತೆಗಳ ಸಾಹಿತ್ಯದ ಸಾಲುಗಳನ್ನು ಸಂಯೋಜಿಸುವುದು ಹೇಗೆ? ಪ್ರತಿಯೊಂದು ಗೀತೆಗೂ ಕನಿಷ್ಟ ಪಕ್ಷ ೧೦ ರಿಂದ ೧೫ ಸಾಲುಗಳಾದರೂ ಬೇಕಾಗುತ್ತದೆ. ನನಗೆ ವಿಕಿಪೀಡಿಯಾದಲ್ಲಿ ಹೆಚ್ಚು ಅನುಭವ ಇಲ್ಲ - ಆದ್ದರಿಂದ ದಯವಿಟ್ಟು ನನ್ನ ಪ್ರಶ್ನೆಗೆ ಯಾರಾದರೂ ಉತ್ತರ ನೀಡಿ. ಧನ್ಯವಾದಗಳು. ನರಸಿಂಹ ೧೨:೩೫, ೨ July ೨೦೦೬ (UTC)ನರಸಿಂಹ
- ಚಿತ್ರಗೀತೆಗಳ ಸಾಹಿತ್ಯಕ್ಕೂ ಕೃತಿಸ್ವಾಮ್ಯ (ಕಾಪಿರೈಟ್) ಇರುತ್ತದೆಯೆ? ಅಂದರೆ ಈ ವಿಶ್ವಕೋಶದಲ್ಲಿ ಆ ಸಾಲುಗಳನ್ನು ಸಂಯೋಜಿಸಲಾಗದೆ? ನರಸಿಂಹ ೧೩:೫೮, ೩ July ೨೦೦೬ (UTC)
- ಚಿತ್ರಗೀತೆ ಸಾಹಿತ್ಯವನ್ನು ಕನ್ನಡ ವಿಕಿಸೋರ್ಸ್ ನಲ್ಲಿ ಹಾಕಬಹುದು.
- ಕನ್ನಡ ವಿಕಿಸೋರ್ಸ್ ತಾಣ ತಯಾರಿಕೆ ಹಂತದಲ್ಲಿದೆ.
- ವಿಕಿಸೋರ್ಸ್ ಮುಖ್ಯತಾಣದಲ್ಲಿನ ಕನ್ನಡ ಪುಟಗಳನ್ನು ಇಲ್ಲಿ ನೋಡಬಹುದು. - ಮನ | Mana ೨೩:೩೮, ೩ July ೨೦೦೬ (UTC)