ಸದಸ್ಯ:Pavanaja
From Wikipedia
This page's content added by ಹರಿ ಪ್ರಸಾದ್ ನಾಡಿಗ್
ಡಾ|| ಪವನಜರವರ ಪುಟ.
ಡಾ. ಪವನಜ ವಿಜ್ಞಾನಿ, ಕನ್ನಡ ಅಭಿಮಾನಿ, ಕನ್ನಡ ಸಾಫ್ಟ್ವೇರ್ ಜಗತ್ತಿನಲ್ಲಿ ಚಿರಪರಿಚಿತರಾದ ಇವರು ಕನ್ನಡ ವಿಕಿಪೀಡಿಯ ಸಮುದಾಯದಲ್ಲಿ ಕೂಡ ಸದಸ್ಯರು. ಕನ್ನಡ ವಿಕಿಪೀಡಿಯದಲ್ಲಿ ಹಾಕಲಾಗಿರುವ ಹಲವು ಚಿತ್ರಗಳು ಹಾಗೂ ಲೇಖನಗಳು ಇವರ ಜನಪ್ರಿಯ ಅಂತರಜಾಲ ತಾಣ - ವಿಶ್ವಕನ್ನಡ ಡಾಟ್ ಕಾಮ್ ನಿಂದ ತೆಗೆದುಕೊಂಡದ್ದು. ತಮ್ಮ ವೆಬ್ ಸೈಟಿನಲ್ಲಿರುವ ಚಿತ್ರಗಳು ಹಾಗೂ ಲೇಖನಗಳನ್ನು ವಿಕಿಪೀಡಿಯಾದ ಮುಕ್ತ ಲೈಸೆನ್ಸಿನಡಿ ಹಾಕುವುದಕ್ಕೆ ಅನುಮತಿ ನೀಡಿರುವ ಇವರಿಗೆ ಕನ್ನಡ ವಿಕಿಪೀಡಿಯ ಸಮುದಾಯ ಚಿರರುಣಿ ಎಂದು ಹೇಳಿದರೆ ತಪ್ಪಾಗದು ಡಾ. ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು 'ವಿಜಯಕರ್ನಾಟಕ'ದಲ್ಲಿ ಬರೆಯುತ್ತಿದ್ದರು. ಆಮೇಲೆ 'ಹೊಸದಿಗಂತ' ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. .