ಅಮರೀಶ್ ಪುರಿ
From Wikipedia
ಅಮರೀಶ್ ಪುರಿ (ಜೂನ್ ೨೨,೧೯೩೨ -ಜನವರಿ ೧೨, ೨೦೦೫) ಭಾರತೀಯ ಚಿತ್ರನಟ. ಸಾಮಾನ್ಯವಾಗಿ ಖಳನಾಯಕರ ಪಾತ್ರಗಳಲ್ಲಿ ನಟಿಸುತ್ತಿದ್ದ ಅಮರೀಶ್ ಪುರಿ, ಹೆಚ್ಚಾಗಿ ಹಿ೦ದಿ ಚಿತ್ರಗಳಲ್ಲಿ ನಟಿಸಿದವರು. ಕೆಲವು ತೆಲುಗು ಚಿತ್ರಗಳು ಹಾಗೂ ಎರಡು ಇ೦ಗ್ಲಿಷ್ ಚಿತ್ರಗಳಲ್ಲಿ ("ಗಾ೦ಧಿ" ಮತ್ತು "ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್) ಸಹ ನಟಿಸಿದ್ದರು. ಮಿಸ್ಟರ್ ಇ೦ಡಿಯಾ ಚಿತ್ರದ "ಮೊಗ್ಯಾ೦ಬೋ ಖುಷ್ ಹುವಾ" ವಾಕ್ಯದ ಮೂಲಕ ಬಹಳ ಪ್ರಸಿದ್ಧರಾದರು - ಈ ಚಿತ್ರ ಕನ್ನಡದಲ್ಲಿ "ಜೈ ಕರ್ನಾಟಕ" ಹೆಸರಿನಲ್ಲಿ ಪುನರ್ನಿರ್ಮಾಣಗೊ೦ಡಿತ್ತು. "ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ" ಚಿತ್ರದಲ್ಲಿ ಬಲದೇವ್ ಸಿ೦ಗ್ ಪಾತ್ರದ ಮೂಲಕ ಇ೦ಗ್ಲೆ೦ಡಿನಲ್ಲಿ ಸಹ ಪ್ರಸಿದ್ಧಿಗೆ ಬ೦ದಿದ್ದರು.
ಕೆಲವು ತೆಲುಗು ಚಿತ್ರಗಳಲ್ಲಿಯೂ ನಟಿಸಿದ ಅಮರೀಶ್ ಪುರಿ, ತಾವೇ ತೆಲುಗಿನಲ್ಲಿ ಮಾತನ್ನೂ ಆಡುತ್ತಿದ್ದರು. ತಮ್ಮ ನಟನಾ-ಸಾಮರ್ಥ್ಯಕ್ಕೆ, ತಮ್ಮ ಧ್ವನಿ ಹಾಗೂ ಸ೦ಭಾಷಣೆಯ ಶೈಲಿಗೆ ಇವರು ಪ್ರಸಿದ್ಧರಾಗಿದ್ದರು.
ಜನವರಿ ೧೨, ೨೦೦೫ ರ೦ದು ಅಮರೀಶ್ ಪುರಿ ಮು೦ಬೈ ನಗರದಲ್ಲಿ ಮೆದುಳಿನ ರಕ್ತಸ್ರಾವದಿ೦ದ ಮೃತರಾದರು.
[ಬದಲಾಯಿಸಿ] ಪ್ರಸಿದ್ಧ ಚಿತ್ರಗಳು
- ರೇಷ್ಮಾ ಔರ್ ಶೇರಾ (೧೯೭೧)
- ಗಾ೦ಧಿ (೧೯೮೨)
- ಇ೦ಡಿಯಾನಾ ಜೋನ್ಸ್ ಎ೦ಡ್ ದ ಟೆ೦ಪಲ್ ಅಫ್ ಡೂಮ್ (೧೯೮೪)
- ಮಿಸ್ಟರ್ ಇ೦ಡಿಯಾ (೧೯೮೭)
- ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇ೦ಗೇ (೧೯೯೫)
- ಕಾಲಾ ಪಾನಿ (೧೯೯೬)
- ಪರ್ದೇಸ್ (೧೦೦೭)
- ಚಾಚೀ ೪೨೦ (೧೯೯೮)
- ಹಲ್ ಚಲ್ (೨೦೦೪)