ಜ್ಯೋತಿರ್ವರ್ಷ
From Wikipedia
ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ. ಬೆಳಕು ಒ೦ದು ವರ್ಷದಲ್ಲಿ ಸಾಗುವ ದೂರಕ್ಕೆ ಒ೦ದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒ೦ದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒ೦ದು ವರ್ಷದಲ್ಲಿ ಸಾಗುವ ದೂರ. ಇ೦ತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒ೦ದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ.
ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ೦ದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ"