ಜ.ಚ.ನಿ.
From Wikipedia
ಜ.ಚ.ನಿ.(ಜನನ:೧೯೧೧, ಸೆಪ್ಟೆಂಬರ್ ೧೧) - ಜಗದ್ಗುರು ಶ್ರೀ ಚನ್ನಬಸವರಾಜದೇಶಿಕೇಂದ್ರ ಶಿವಾಚಾರ್ಯರು ನಿಡುಮಾಮಿಡಿಯವರು ಕನ್ನಡದಲ್ಲಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತಿಗಳಲ್ಲಿ ಪ್ರಮುಖರು.
[ಬದಲಾಯಿಸಿ] ಜೀವನ
ಜ.ಚ.ನಿ ಅವರು ೧೯೧೧ರ ಸೆಪ್ಟೆಂಬರ್ ೧೧ರಂದು ಬೆಳಗಾವಿ ಜಿಲ್ಲೆಯ ಅಂಬಡಗಟ್ಟಿಯಲ್ಲಿ ಜನಿಸಿದರು. ಇವರು ೪೦೦೦ಕ್ಕೂ ಹೆಚ್ಚು ವಚನಗಳನ್ನೂ , ೧೪೦ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದಾರೆ. ಇವರ ಅಂಕಿತ: “ನಿಡುಮಾಮಿಡಿ ಶ್ರೀ ಗಿರಿಸೂರ್ಯ ಸಿಂಹಾಸನಾಧೀಶ್ವರ”.
ಆದಿರೇಣುಕರ ಸಂಸ್ಕೃತ ಗ್ರಂಥ “ಸಿದ್ಧಾಂತ ಶಿಖಾಮಣಿ”ಯನ್ನು “ಮಣಿಕಾಂತಿ” ಎನ್ನುವ ಹೆಸರಿನಿಂದ ಗದ್ಯರೂಪದಲ್ಲಿ ಹಾಗು “ಮಣಿಮುಕುರಂ” ಎನ್ನುವ ಹೆಸರಿನಲ್ಲಿ ಪದ್ಯರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
[ಬದಲಾಯಿಸಿ] ಸಾಹಿತ್ಯ ಕೃತಿಗಳು
- ವಚನಾಂಜಲಿ
- ವಚನ ಮಂಜರಿ
- ಮಣಿ ವಚನಗಳು
- ಶಿವಾದ್ವೈತ ದರ್ಶನ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ೧೯೧೧ ಜನನ