ದ್ಯುತಿಸಂಶ್ಲೇಷಣೆ
From Wikipedia
ದ್ಯುತಿಸಂಶ್ಲೇಷಣೆ - ಬೆಳಕು, ಇಂಗಾಲದ ಡೈಆಕ್ಸೈಡ್ ಮತ್ತು ನೀರುಗಳಿಂದ ಸಕ್ಕರೆಯನ್ನು ಸಂಶ್ಲೇಷಿಸಿ, ಆಮ್ಲಜನಕವನ್ನು ವ್ಯರ್ಥ ಉತ್ಪನ್ನವಾಗಿ ಹೊರಹಾಕುವ ಪ್ರಕ್ರಿಯೆ. ತಿಳಿದಿರುವ ಜೀವರಸಾಯನಿಕ ಪ್ರಕ್ರಿಯೆಗಳಲ್ಲಿ ಇದು ಅತ್ಯಂತ ಮುಖ್ಯವಾದದ್ದು: ಬಹುತೇಕ ಎಲ್ಲಾ ಜೀವಿಗಳೂ ಇದರ ಮೇಲೆ ಅವಲಂಬಿತವಾಗಿವೆ.
ಸರಳವಾದ ರಸಾಯನಶಾಸ್ತ್ರದ ಸಮೀಕರಣದಲ್ಲಿ ದ್ಯುತಿಸಂಶ್ಲೇಷಣೆಯನ್ನು ಈ ರೀತಿ ವ್ಯಕ್ತ ಪಡಿಸಬಹುದು:
-
6 CO2 + 12 H2O + light → C6H12O6 + 6 O2 + 6 H2O -
ಇಂಗಾಲದ ಡೈಆಕ್ಸೈಡ್ + ನೀರು + ಬೆಳಕಿನ ಶಕ್ತಿ → ಗ್ಲೂಕೋಸ್ + ಆಮ್ಲಜನಕ + ನೀರು