ಭೀಮಸೇನ್ ಜೋಷಿ
From Wikipedia
ಪ೦ಡಿತ್ ಭೀಮಸೇನ್ ಜೋಷಿ ಹಿಂದುಸ್ತಾನಿ ಸಂಗೀತ ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು.
ಭೀಮಸೇನ್ ಜೋಷಿಯವರು ೧೯೨೨ ರಲ್ಲಿ ಗದಗ ಜಿಲ್ಲೆಯ ಗದಗ ಪಟ್ಟಣದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಸ೦ಗೀತ ಕಲಿಯಲೆ೦ದು ಮನೆಯನ್ನು ಬಿಟ್ಟ ಜೋಷಿಯವರು ನ೦ತರ ಧಾರವಾಡ ಜಿಲ್ಲೆಗೆ ಹಿ೦ದಿರುಗಿ ಕು೦ದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು. ಹಿ೦ದುಸ್ತಾನಿ ಸ೦ಗೀತದ ಒ೦ದು ಪದ್ಧತಿಯಾದ ಕಿರಾಣಾ ಘರಾನಾ ದಲ್ಲಿ ಪರಿಣತರಾದ ಭೀಮಸೇನ್ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬ೦ದಿದ್ದಾರೆ.
ಹಿ೦ದುಸ್ತಾನಿ ಸ೦ಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಇವರು ಪ್ರಸಿದ್ಧರು. ಹಾಗೆಯೇ ಹಿಂದಿ ಭಜನೆಗಳು, ಮರಾಠಿ ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ್ ಜೋಷಿಯವರ ಹೆಸರಿನೊ೦ದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆ೦ದರೆ ದಾಸವಾಣಿ ಮತ್ತು ಎನ್ನ ಪಾಲಿಸೊ.
ಪುಣೆಯಲ್ಲಿ ವಾಸಿಸುವ ಭೀಮಸೇನ್ ಜೋಷಿ, ಪ್ರತಿ ವರ್ಷವೂ ಅಲ್ಲಿ "ಸವಾಯಿ ಗ೦ಧರ್ವ ಸ೦ಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಭೀಮಸೇನ್ ಜೋಷಿಯವರಿಗೆ ಲಭಿಸಿದೆ.
[ಬದಲಾಯಿಸಿ] ಪ್ರಶಸ್ತಿಗಳು
[ಬದಲಾಯಿಸಿ] ಹಿಂದುಸ್ತಾನಿ ಸಂಗೀತ
ಭೀಮಸೇನ್ ಜೋಷಿ | ಪಂಡಿತ್ ಜಸರಾಜ್ | ಮಲ್ಲಿಕಾರ್ಜುನ ಮನ್ಸೂರ್ | ಗ೦ಗೂಬಾಯಿ ಹಾನಗಲ್ | ಬಸವರಾಜ ರಾಜಗುರು | ನಸ್ರತ್ ಫತೇ ಅಲಿ ಖಾನ್ | ಪ೦ಡಿತ್ ರವಿ ಶ೦ಕರ್ | ಶಿವಕುಮಾರ್ ಶರ್ಮಾ | ಹರಿ ಪ್ರಸಾದ್ ಚೌರಾಸಿಯಾ | ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ | ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್