ಸಹಾಯ:ಸಂಪಾದನೆ FAQ
From Wikipedia
Shortcut: WP:HOWTO |
ಕನ್ನಡ ವಿಕಿಪೀಡಿಯಾಕ್ಕೆ ಸೀಮಿತವಾದ, ಸಂಪಾದನೆ ಮಾಡುವ ಸಮಯದಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲು ಪ್ರಯತ್ನಿಸಲಾಗಿದೆ... ಓದಿ.
ಪರಿವಿಡಿ |
[ಬದಲಾಯಿಸಿ] ಹೊಸ ಸದಸ್ಯರನ್ನು ಸ್ವಾಗತಿಸುವುದು ಹೇಗೆ?
ವಿಕಿಪೀಡಿಯಾಕ್ಕೆ ಬರುವ ಹೊಸ ಸದಸ್ಯರನ್ನು ಸ್ವಾಗತಿಸುವುದು ಎಲ್ಲ ವಿಕಿಪೀಡಿಯಾಗಳಲ್ಲೂ ವಾಡಿಕೆ. ಸ್ವಾಗತಿಸಲು ನೀವು ಮಾಡಬೇಕಾದದ್ದು ಇಷ್ಟೆ: ಟೆಂಪ್ಲೇಟ್ ಒಂದನ್ನು ಆಯಾ ಸದಸ್ಯರ ಚರ್ಚೆ ಪುಟಕ್ಕೆ ಸೇರಿಸುವುದು.
{{ಸುಸ್ವಾಗತ}}
ಎಂದು ಟೈಪ್ ಮಾಡಿ ಸ್ವಾಗತ ಟೆಂಪ್ಲೇಟನ್ನು ಸೇರಿಸಬಹುದು.
[ಬದಲಾಯಿಸಿ] ವಿಶೇಷ ಲೇಖನವನ್ನು ಸೇರಿಸುವುದು ಹೇಗೆ?
ವಿಶೇಷ ಲೇಖನವನ್ನು ಉಳಿದವರ ಸಲಹೆಯನ್ನು ಕೇಳದೇ ಬದಲಿಸಕೂಡದು. ಸಲಹೆಗೆ ಸಜ್ಜಾಗಿರುವ ಆಯಾ ಸಂಚಿಕೆಯ ಚರ್ಚಾ ಪುಟದಲ್ಲಿ ಸದಸ್ಯರು ತಮ್ಮ ಸಲಹೆಗಳನ್ನು ಸೇರಿಸಬಹುದು. ಸೇರಿಸಿದ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.
[ಬದಲಾಯಿಸಿ] 'ವಿಶೇಷ ಲೇಖನ' ಪುಟವನ್ನು ಬದಲಿಸುವುದು
- ಚರ್ಚೆ ನಡೆದ ಸಂಚಿಕೆಯಲ್ಲಿರುವ ಸಂದೇಶವನ್ನು ತೆಗೆದು ಹೊಸ ಸಂಚಿಕೆಗೆ ಹೊಸ ಪುಟ ಪ್ರಾರಂಭಿಸಿ ಅದರಲ್ಲಿ ಸೇರಿಸಿ.
- ವಿಶೇಷ ಲೇಖನದಲ್ಲಿ ಇನ್ನುಳಿದ ಲೇಖನಗಳಿಗೆ ಸಾಕಷ್ಟು ಸಂಪರ್ಕಗಳಿರಬೇಕು. ಇತರ ಲೇಖನಗಳೆಡೆಗೆ ಓದುಗರನ್ನು ಕೊಂಡೊಯ್ಯುವುದು ಇದರ ಉದ್ದೇಶಗಳಲ್ಲೊಂದು. ಹಾಗಾಗಿ ಆಯ್ಕೆ ಮಾಡಿದ ಲೇಖನದಿಂದ ಮುಖ್ಯವಾದ ಅಂಶಗಳನ್ನು ಆಯ್ದು ವಿಶೇಷ ಲೇಖನದ ಸಂಚಿಕೆಗೆ ಸೇರಿಸಬೇಕು.
- ವಿಶೇಷ ಲೇಖನ ಸಂಚಿಕೆ ಟೆಂಪ್ಲೇಟಿಗೆ ಸೇರಿಸಿದ ಕನ್ನಡ ಸಾಧ್ಯವಾದಷ್ಟು ಚೊಕ್ಕವಾಗಿ ಹಾಗೂ ತಪ್ಪಿಲ್ಲದಂತಿರುವಂತೆ ನೋಡಿಕೊಳ್ಳಿ.
- ಮೇಲಿನವುಗಳನ್ನು ಪೂರೈಸಿದ ನಂತರ Wikipedia:ವಿಶೇಷ ಬರಹ ಪುಟದಲ್ಲಿ ಹೊಸ ಲೇಖನದ ಟೆಂಪ್ಲೇಟ್ ಸೇರಿಸಿ. ಉದಾ:
{{Wikipedia:ವಿಶೇಷ ಬರಹ/ಸಂಚಿಕೆ - ೧೨}}
- ಅದೇ ಪುಟದಲ್ಲಿರುವ ಕೆಳಗಿನ ಸಂಪರ್ಕಗಳನ್ನು ಹೊಸ ಸಂಚಿಕೆಗೆ ಹೊಂದುವಂತೆ ಸರಿಪಡಿಸಿ. ಉದಾ:
« [[Wikipedia:ವಿಶೇಷ ಬರಹ/ಸಂಚಿಕೆ - ೧೧ | ಹಿಂದಿನ ಸಂಚಿಕೆ]] | [[Wikipedia:ವಿಶೇಷ ಬರಹಗಳು | ಹಳೆಯ ಸಂಚಿಕೆಗಳು]] » <br> [[Wikipedia talk:ವಿಶೇಷ ಬರಹ/ಸಂಚಿಕೆ - ೧೩ | '''ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...''']]
[ಬದಲಾಯಿಸಿ] ಹೊಸ ವಿಶೇಷ ಲೇಖನಗಳಿಗೆ ಎಂತಹ ಲೇಖನಗಳನ್ನು ಆಯ್ಕೆ ಮಾಡಬಹುದು?
ಪೂರ್ಣ ಮಾಹಿತಿಯುಳ್ಳ (ಅಪೂರ್ಣ ಲೇಖನವಾಗಿರಬಾರದು) ಹಾಗೂ ಸಚಿತ್ರ ಲೇಖನವೊಂದನ್ನು ವಿಶೇಷ ಲೇಖನಕ್ಕಾಗಿ ಸಲಹೆ ನೀಡಲು ಆಯ್ಕೆ ಮಾಡಬಹುದು. ಸದ್ಯಕ್ಕೆ ಕನ್ನಡ ವಿಕಿಪೀಡಿಯಾದಲ್ಲಿ ಕನ್ನಡಿಗರ ಉತ್ಸಾಹ ಬೆಳೆಸಲು ಕನ್ನಡಕ್ಕೆ ಸಂಬಂಧಿಸಿದ ಲೇಖನಗಳಿಗೆ ಹೆಚ್ಚಾಗಿ ಒತ್ತು ನೀಡಲಾಗುವುದು. ಈ ಹಿಂದೆ ವಿಶೇಷ ಲೇಖನವಾಗಿ ಸೇರಿಸಿರದಂತಹ ಲೇಖನವಾಗಿರಬೇಕು.
[ಬದಲಾಯಿಸಿ] ಸುದ್ದಿ ಸೇರಿಸುವುದು ಹೇಗೆ
ಸ್ವಂತ ಲೇಖನವಿರುವ ಸುದ್ದಿಯನ್ನು ಸೇರಿಸುವುದು ವಿಕಿಪೀಡಿಯಾದಲ್ಲಿ ವಾಡಿಕೆ. ಅಲ್ಲದೇ ಲೇಖನಗಳವರೆಗೆ ಓದುಗರು ತಲುಪಲಿ ಎಂದೇ ಸುದ್ದಿ ಕಾಲಂ ಇರುವುದು. ವಿಶ್ವಕೋಶವು ನಿರಂತರ ಸುದ್ದಿಯ ಕೇಂದ್ರವಲ್ಲವಾದ್ದರಿಂದ ಕೇವಲ ಪ್ರಮುಖವಾದ ಸುದ್ದಿಯನ್ನು ಸೇರಿಸಲಾಗುತ್ತದೆ. ಅದೂ ಕೂಡ ಅದರ ಬಗ್ಗೆ ಒಂದು ಲೇಖನವಿದ್ದ ಪಕ್ಷದಲ್ಲಿ ಮಾತ್ರ. (ಬೇಕಿದ್ದಲ್ಲಿ ಸುದ್ದಿ ಸೇರಿಸಲು ಉತ್ಸಾಹವಿರುವವರು ಲೇಖನವೊಂದನ್ನು ಸೇರಿಸಿ ಸುದ್ದಿ ಕಾಲಂ ಸೇರುವಂತೆ ಮಾಡಬಹುದು). ಸುದ್ದಿ ಸೇರಿಸಲು ಕೆಲವು ಮಾರ್ಗದರ್ಶಿಗಳು:
- ಸುದ್ದಿ ಉದ್ದೇಶಿಸುವ ಪ್ರಮುಖ ವಸ್ತು/ವ್ಯಕ್ತಿ/ವಿಷಯಗಳ ಬಗ್ಗೆ ಕನ್ನಡ ವಿಶ್ವಕೋಶದಲ್ಲೊಂದು ಲೇಖನವಿರಬೇಕು.
- ಸುದ್ದಿ ಮಹತ್ವದ್ದಾಗಿರಬೇಕು - ಉದಾಹರಣೆಗೆ ಆಂಗ್ಲ ವಿಕಿಪೀಡಿಯ ನೋಡಿ.
- ಸುದ್ದಿ ಚುಟುಕಾಗಿರಬೇಕು - ಒಂದು ವಾಕ್ಯವಾದಲ್ಲಿ ಒಳಿತು.
- ಸಾಧ್ಯವಾದಷ್ಟು ಲೇಖನಗಳಿಗೆ ಸಂಪರ್ಕಗಳನ್ನು ಹೊಂದಿರಬೇಕು.
[ಬದಲಾಯಿಸಿ] ಮುಖ್ಯ ಪುಟವನ್ನು ಬದಲಾಯಿಸುವುದು ಹೇಗೆ? ಇದನ್ನು ಬದಲಾಯಿಸಲು ನಿರ್ವಾಹಕರಾಗಿರಬೇಕೆ?
ಮುಖ್ಯ ಪುಟದಲ್ಲಿರುವ ಮಾಹಿತಿಯನ್ನು ಬದಲಿಸಲು ನಿರ್ವಾಹಕರಾಗಬೇಕೆಂದಿಲ್ಲ. ಮುಖ್ಯ ಪುಟವನ್ನು ವಿಕೃತಗೊಳಿಸುವುದನ್ನು ತಡೆಯಲು ಪುಟವನ್ನು ಮಾತ್ರ ಲಾಕ್ ಮಾಡಿರಲಾಗಿರುತ್ತದೆ. ಆದರೆ ಅದರಲ್ಲಿರುವ ಮಾಹಿತಿಯನ್ನು ಟೆಂಪ್ಲೇಟ್ ಗಳ ಮೂಲಕ ಬೇರೆಡೆ ಸೇರಿಸಿರಲಾಗಿರುತ್ತದೆ. ಟೆಂಪ್ಲೇಟ್ ಗಳಲ್ಲಿರುವ ಮಾಹಿತಿಯನ್ನು ಬದಲಿಸಿದಾಗ ಮುಖ್ಯ ಪುಟದಲ್ಲಿ ಕೂಡ ಮಾಹಿತಿ ಬದಲಾಗುತ್ತದೆ. ಇಂತಹ ಹಲವು ಟೆಂಪ್ಲೇಟ್ ಗಳಿಂದ ಮುಖ್ಯ ಪುಟವನ್ನು ನಿರ್ಮಿಸಲಾಗಿದೆ. ಮುಖ್ಯ ಪುಟಕ್ಕೆ ಸೇರಿಸಲಾಗಿರುವ ಪ್ರತಿಯೊಂದು ಟೆಂಪ್ಲೇಟಿನ ಸಂಪರ್ಕ ಕೆಳಗಿವೆ. (ಮುಖ್ಯ ಪುಟದ ಆಕರವನ್ನು ವೀಕ್ಷಿಸುವಾಗ ಕೂಡ ಈ ಸಂಪರ್ಕಗಳು ಪುಟದ ಕೊನೆಗೆ ಕಾಣಸಿಗುತ್ತವೆ).
- Template:ಪ್ರಚಲಿತ
- Template:ನಿಮಗಿದು ಗೊತ್ತೆ?
- Template:Donate
- Template:ಹೊಸತು
- Template:ಆಯ್ದ ಪ್ರಮುಖ ದಿನಗಳು
- Template:ಸುದ್ದಿ
- Template:ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ
- Template:ವಿಕಿಪೀಡಿಯಾ ಸುದ್ದಿ
- Template:ಇತರ ಪ್ರಾಜೆಕ್ಟ್ಗಳು
- Template:ಮುಖ್ಯ ಪುಟದ ಪರಿವಿಡಿ
- Template:ಆಯ್ದ ಪ್ರಮುಖ ದಿನಗಳು/ಸಂಪರ್ಕಗಳು
- Template:ಪೀಠಿಕೆ
- Template:ವಾರದ ಸಹಯೋಗ
- Template:ದಿನ ವಿಶೇಷ
ಮುಖ್ಯ ಪುಟದ ಮೇಲೆ ಪ್ರಯೋಗ ಮಾಡಲು ಈ ಪುಟವನ್ನು ಉಪಯೋಗಿಸಬಹುದು.
[ಬದಲಾಯಿಸಿ] ನಾನೂ ಕೂಡ ನಿರ್ವಾಹಕನಾಗಬೇಕು... ಹೇಗೆ ನಿರ್ವಾಹಕನಾಗುವುದು?
ನಿರ್ವಾಹಕರಾಗಲು ವಿಕಿಪೀಡಿಯಾದಲ್ಲಿ ಸಾಕಷ್ಟು ಕೆಲಸ ಮಾಡಿರಬೇಕು, ಉಪಯುಕ್ತವಾದಂತಹ ಲೇಖನಗಳನ್ನು ಬರೆದಿರಬೇಕು. ಇಂತಹ ಸದಸ್ಯರು ನಿರ್ವಾಹಕ ಹಕ್ಕುಗಳನ್ನು ಪಡೆಯಲು ನಡೆಯುವ ಚುನಾವಣೆಗೆ ನಿಲ್ಲಲು ಅರ್ಹರಾಗಿರುತ್ತಾರೆ. ಸದಸ್ಯರು ತಮ್ಮನ್ನು ತಾವೇ ನೊಂದಾಯಿಸಿಕೊಳ್ಳಬಹುದು, ಅಥವಾ ಬೇರೊಬ್ಬರ ಮೂಲಕ ನೋಂದಣಿಯನ್ನು ಪಡೆಯಬಹುದು. ಉಳಿದ ಸದಸ್ಯರು ಹಾಗೂ ನಿರ್ವಾಹಕರ ಮತಗಳನ್ನು ಅಳೆದು ನಿರ್ವಾಹಕ ಹಕ್ಕುಗಳನ್ನು ಸದಸ್ಯರಿಗೆ ನೀಡಲಾಗುತ್ತದೆ. ನಿರ್ವಾಹಕ ಚುನಾವಣೆಯಲ್ಲಿ ನಿಲ್ಲುವವರಿಂದ ಈ ಕೆಳಗಿನವನ್ನು ಅಪೇಕ್ಷಿಸಲಾಗುತ್ತದೆ..
- ವಿಕಿಪೀಡಿಯಾದಲ್ಲಿ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸಿರಬೇಕು.
- ಲೇಖನಗಳನ್ನು ವಿಕೃತಗೊಳಿಸುವುದರಲ್ಲಿ ಪಾತ್ರ ವಹಿಸಿರಕೂಡದು.