ಸಾಂಖ್ಯ
From Wikipedia
ಹಿಂದೂ ಸಿದ್ಧಾಂತ ಸರಣಿಯ ಲೇಖನ |
|
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕಾ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ಸಾಂಖ್ಯ (ಸಂಸ್ಕೃತದಲ್ಲಿ सांख्य) ಭಾರತೀಯ ಸಿದ್ಧಾಂತಗಳ ಒಂದು ಪಂಥ. ಹಿಂದೂ ಸಿದ್ಧಾಂತದ ಮೇಲೆ ವೈದಿಕ ಪ್ರಭಾವವನ್ನು ಮಾನ್ಯತೆ ಮಾಡುವ ಆರು ಆಸ್ತಿಕಗಳಲ್ಲಿ ಒಂದು. ಬೌದ್ಧ ಧರ್ಮ(ಕ್ರಿ.ಪೂ. ೫೦೦)ಕ್ಕೂ ಮುನ್ನ ಪ್ರತಿಪಾದಿತವಾದ ಇದನ್ನು ಹಿಂದೂ ಧರ್ಮದ ಅತಿ ಪ್ರಾಚೀನ ಮತ್ತು ಸಂಪ್ರದಾಯ ಬದ್ಧ ಸಿದ್ಧಾಂತವೆಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ ವಿಶ್ವವು ಎರಡು ಬಗೆಯ ಶಾಶ್ವತ ಸತ್ಯಗಳಿಂದ ಕೂಡಿದೆ - ಅವುಗಳೆಂದರೆ ಪುರುಷ (ಪ್ರಜ್ಞೆಯ ಕೇಂದ್ರ) ಮತ್ತು "ಪ್ರಕೃತಿ" (ಪ್ರಾಪಂಚಿಕ ಅಸ್ತಿತ್ವದ ಮೂಲ)
ಸಾಂಖ್ಯ ಪಂಥವು ಯೋಗ ಪಂಥದಿಂದ ಪ್ರಭಾವಿತಗೊಂಡಿದೆ. ಕಪಿಲ ಮುನಿಯನ್ನು ಸಾಂಪ್ರದಾಯಿಕವಾಗಿ ಸಾಂಖ್ಯ ಪಂಥದ ಸ್ಥಾಪಕರೆಂದು ಪರಿಗಣಿಸಲಾಗುತ್ತದೆಯಾದರೂ ಇದಕ್ಕೆ ಚಾರಿತ್ರಿಕ ಉಲ್ಲೇಖಗಳು ಸಿಕ್ಕಿಲ್ಲ. ಶಾಸ್ತ್ರೀಯ ಸಾಂಖ್ಯದ ಕೃತಿ ಸಾಂಖ್ಯ ಕಾರಿಕವನ್ನು ಈಶ್ವರ ಕೃಷ್ಣ ಎಂಬ ಕವಿ ಕ್ರಿ.ಶ. ೨೦೦ ರ ಆಸುಪಾಸು ಬರೆದಿದ್ದಾನೆ.
ಪರಿವಿಡಿ |
[ಬದಲಾಯಿಸಿ] ಸಾಂಖ್ಯ ತತ್ವದ ಮೂಲ
ಸಾಂಖ್ಯ ಪಂಥದ ಪ್ರಕಾರ ಜ್ಞಾನವನ್ನು ಮೂರು ಪ್ರಮಾಣಗಳಿಂದ ಪಡೆಯಬಹುದಾಗಿದೆ:
- ಪ್ರತ್ಯಕ್ಷ - ಇಂದ್ರಿಯಗಳಿಂದ ಗ್ರಹಣ
- ಅನುಮಾನ - ತಾರ್ಕಿಕ ನಿಷ್ಪತ್ತಿ
- ಶಬ್ದ - ಕಂಠೋಕ್ತ ಆಧಾರ
[ಬದಲಾಯಿಸಿ] ಸಾಂಖ್ಯದ ಅನುಭಾವ
ಸಾಂಖ್ಯವು ಮೇಲೆ ತಿಳಿಸಿದಂತೆ ಪುರುಷ ಮತ್ತು ಪ್ರಕೃತಿಗಳ ದ್ವೈತವನ್ನು ಎತ್ತಿ ಹಿಡಿಯುತ್ತದೆ. ಎಲ್ಲ ಭೌತಿಕ ಆಗುಹೋಗುಗಳನ್ನು ಪ್ರಕೃತಿಯೇ ಮೂಲ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಚೇತನಯುಕ್ತ ಜೀವಿಯೇ ಪುರುಷ. ಪುರುಷಕ್ಕೆ ಶಾರೀರಿಕ ಗಡಿಗಳ ಬಂಧನವಿಲ್ಲ. ಪುರುಷಕ್ಕೆ ಸರಿಯಾದ ಜ್ಞಾನವಿಲ್ಲದಿದ್ದಾಗ ತಪ್ಪು ಕಲ್ಪನೆಯಿಂದ ಭೌತಿಕ ಶರೀರ(ಪ್ರಕೃತಿಯ ಒಂದು ಭಾಗ)ವನ್ನೇ ತಪ್ಪಾಗಿ ತನ್ನನ್ನಾಗಿ ಗುರುತಿಸಿಕೊಳ್ಳುತ್ತದೆ. ಇದರಿಂದ ಸಂಸಾರದ ಬಂಧನದಲ್ಲಿ ಸಿಲುಕುತ್ತದೆ. ಪ್ರಜ್ಞೆಗೆ ಸಿಲುಕುವ ಪುರುಷ ಮತ್ತು ಪ್ರಜ್ಞೆಗೆ ಸಿಲುಕದಿರುವ ಪ್ರಕೃತಿ - ಇವುಗಳ ವ್ಯತ್ಯಾಸ ತಿಳಿದಾಗಲೇ ಆತ್ಮಕ್ಕೆ ಸಂಸಾರದ ಬಂಧನದಿಂದ ಬಿಡುಗಡೆ ದೊರೆಯುವುದು.
ಸಾಂಖ್ಯದ ಒಂದು ಗಮನಾರ್ಹ ಅಂಶವೆಂದರೆ ವಿಶ್ವದ ಉಗಮವನ್ನು ತಿಳಿಸುತ್ತದೆ. ಇದರ ಪ್ರಕಾರ ಪ್ರಕೃತಿ ವಿಶ್ವಕ್ಕೆ ಮೂಲ. ಇದಕ್ಕೆ ೨೪ ತತ್ತ್ವ ಗಳಾಗುವ ಸಂಭಾವ್ಯತೆ ಇರುತ್ತದೆ. ಪ್ರಕೃತಿ ಯಾವಾಗಲೂ ತನ್ನ ಅಂಗಗಳಿಂದ ಕೂಡಿಕೊಂಡಿದೆ:
- ಸತ್ತ್ವ - ಸಮತೋಲನ
- ರಜಸ್ - ಚಟುವಟಿಕೆ
- ತಮಸ್ - ಜಡತ್ವ
ಪ್ರಕೃತಿ ಯಿಂದ ಉಗಮಿಸುವ ೨೪ ತತ್ತ್ವಗಳು:
- ಪ್ರಕೃತಿ - ಭೌತಿಕ ಪ್ರಪಂಚದಲ್ಲಿ ಏನಾದರೂ ಸೃಷ್ಟಿಯಾಗಲು ಕಾರಣವಾಗುವ ಸಂಭಾವ್ಯತೆ.
- ಮಹತ್ - ಪ್ರಕೃತಿಯಿಂದ ವಿಶ್ವ ಉಗಮವಾದಾಗ ಹುಟ್ಟುವ ಮೊದಲ ಉತ್ಪಾದನೆ. ಜೀವಿಗಳಲ್ಲಿ ಬುದ್ಧಿ ಹುಟ್ಟಲು ಇದೇ ಕಾರಣ.
- ಅಹಂಕಾರ - ಉಗಮದ ಎರಡನೇ ಉತ್ಪಾದನೆ. ಜೀವಿಗಳಲ್ಲಿ "ಸ್ವಯಂ"ನ ಅರಿಕೆಯ ಕಾರಣ.
- ಮನಸ್ - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುತ್ತದೆ.
- ಪಂಚ ಜ್ಞಾನೇಂದ್ರಿಯಗಳು - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುವ ಐದು ಇಂದ್ರಿಯಗಳು.
- ಪಂಚ ಕರ್ಮೇಂದ್ರಿಯಗಳು - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುವ ಕೈಗಳು, ಕಾಲುಗಳು, ಕಂಠ, ಜನನೇಂದ್ರಿಯಗಳು, ಮತ್ತು ಗುದದ್ವಾರ.
- ಪಂಚ ತನ್ಮಾತ್ರಗಳು ಅಥವಾ ಐದು ಸೂಕ್ಷ್ಮ ಭೂತಗಳು - ಅಹಂಕಾರದ ತಮಸ್ ಭಾಗದಿಂದ ಉಗಮಿಸುವ ಶಬ್ದ, ಸ್ಪರ್ಶ , ದೃಶ್ಯ, ರುಚಿ, ಮತ್ತು ವಾಸನೆ.
- ಪಂಚ ಮಹಾಭೂತಗಳು - ಪೃಥ್ವಿ, ವಾಯು, ಜಲ, ಆಕಾಶ, ಮತ್ತು ಅಗ್ನಿ. ಅರಿವಿಗೆ ಬರುವ ಭೌತಿಕ ಪ್ರಪಂಚದ ಭಾಗಗಳು.
ಸಾಂಖ್ಯವು ಕಾರಣಾತ್ಮಕ ಸಂಬಂಧಗಳನ್ನು ಎತ್ತಿ ಹಿಡಿಯುತ್ತದೆ. ಕಾರಣ ಮತ್ತು ಪರಿಣಾಮಗಳ ವಾದವಾದ ಸತ್ಕಾರ್ಯ ವಾದ ದ ಪ್ರಕಾರ ಶೂನ್ಯದಿಂದ ಏನನ್ನೂ ಅಥವಾ ಏನನ್ನೂ ಶೂನ್ಯಕ್ಕೆ ಸೃಷ್ಟಿಸಲಾಗವುದಿಲ್ಲ. ಎಲ್ಲ ಸೃಷ್ಟಿಯೂ ಪ್ರಕೃತಿಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ.
ಮೊದಲು ಹೇಳಿದಂತೆ ಸಾಂಖ್ಯ ಒಂದು ದ್ವೈತ ಸಿದ್ಧಾಂತ. ಆದರೆ ಇತರ ದ್ವೈತ ಸಿದ್ಧಾಂತಗಳಿಗೂ ಮತ್ತು ಸಾಂಖ್ಯಕ್ಕೂ ವ್ಯತ್ಯಾಸವಿದೆ.
[ಬದಲಾಯಿಸಿ] ವೈಶಿಷ್ಟ್ಯ
- ಸಾಂಖ್ಯವು ವಿಶ್ವದ ಉಗಮವನ್ನು ತಿಳಿಸುತ್ತದೆ.
- ಪುರುಷ ಮತ್ತು ಪ್ರಕೃತಿಗಳ ವ್ಯತ್ಯಾಸ ಪತಂಜಲಿಯ ಯೊಗ ಪದ್ಧತಿಗೆ ಅತಿ ಮುಖ್ಯವಾಗಿದೆ.
- ಸಾಂಖ್ಯವು ಮನಸ್ಸು, ಅಹಂಕಾರ, ಮತ್ತು ಬುದ್ಧಿಗಳನ್ನು ಬೇರೆಯಾಗಿಯೂ ಮತ್ತು ಪ್ರಕೃತಿಯ ಭಾಗವಾಗಿಯೂ ಪರಿಗಣಿಸುತ್ತದೆ.
- ಸಾಂಖ್ಯ ಸಿದ್ಧಾಂತದಲ್ಲಿ ಸೃಷ್ಟಿಕರ್ತನಾಗಿ ಭಗವಂತನನ್ನು ಒಳಗೊಂಡಿಲ್ಲ.
- ವೇದಾಂತ ಸಿದ್ಧಾಂತದ ಪ್ರಕಾರ ಬ್ರಹ್ಮನು ಎಲ್ಲ ಸೃಷ್ಟಿಗೆ ಮೂಲ. ಇದನ್ನು ವಿರೋಧಿಸುವ ಸಾಂಖ್ಯದ ಪ್ರಕಾರ ಅಚೇತನವಾದ ಭೌತಿಕ ಪ್ರಪಂಚವನ್ನು ಚೇತನವು ಹುಟ್ಟಿಹಾಕಲು ಸಾಧ್ಯವಿಲ್ಲ.
[ಬದಲಾಯಿಸಿ] ಇವುಗಳನ್ನೂ ನೋಡಿ
- ಹಿಂದೂ ಧರ್ಮ
- ಯೋಗ
- ಹಿಂದೂ ಸಿದ್ಧಾಂತ
- ಭಾರತೀಯ ಸಿದ್ಧಾಂತಗಳು