ಪಿ.ಬಿ.ಶ್ರೀನಿವಾಸ್
From Wikipedia
ಪಿ.ಬಿ. ಶ್ರೀನಿವಾಸ್ - ಕನ್ನಡ ಚಿತ್ರರಂಗ ಕಂಡಿರುವ ಜನಪ್ರಿಯ ಹಿನ್ನೆಲೆ ಗಾಯಕರುಗಳಲ್ಲೊಬ್ಬರು. ಇವರು ಹಾಡಿರುವ ಕನ್ನಡ ಚಿತ್ರಗೀತೆಗಳು ಅಪಾರ. ಕನ್ನಡಕ್ಕೆ ಪರಿಚಯಿಸಿದವರು ಹೆಸರಾಂತ ನಿರ್ಮಾಪಕರೂ, ನಿರ್ದೇಶಕರೂ, ಕಲಾವಿದರೂ ಆಗಿದ್ದ ನಾಗೇಂದ್ರರಾಯರು. ಅವರು ಹಾಡಿದ ಮೊದಲ ಕನ್ನಡ ಹಾಡು ಜಾತಕಫಲ(೧೯೫೩) ಚಿತ್ರಕ್ಕೆ. ನಂತರ ಓಹಿಲೇಶ್ವರ, ಭಕ್ತ ಕನಕದಾಸ...ಹೀಗೆ ಮುಂದುವರೆಯುತ್ತಾ ಹೋಯಿತು. ಕನ್ನಡದ ಮುಖ್ಯ ನಾಯಕ ನಟರಾಗಿದ್ದ ಡಾ.ರಾಜ್‍ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವರೆಗೆ , ಅವರ ಎಲ್ಲಾ ಚಿತ್ರಗಳಿಗೂ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಭಕ್ತ ಕನಕದಾಸ ಚಿತ್ರದ "ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತು..." ಹಾಡು ಅವರಿಗೆ ಬಹಳ ಮೆಚ್ಚುಗೆಯಾದ ಗೀತೆಯಂತೆ. ಇವರು ಹಿನ್ನೆಲೆ ಗಾಯಕರಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ಹಾಡುಗಳನ್ನು ಸುಮಾರು ಎಂಟು ಭಾಷೆಗಳಲ್ಲಿ ಬರೆದಿದ್ದಾರೆ. ಹಲವಾರು ಗಝಲ್‌ಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. "ನವನೀತ ಸುಮಸುಧಾ" ಎಂಬ ರಾಗವನ್ನೂ ನಿರ್ಮಿಸಿದ್ದಾರೆ. 'ಶ್ರೀನಿವಾಸ ಗಾಯತ್ರಿ ವ್ರತ','ಗಾಯಕುಡಿ ಗೇಯಲು', ಪ್ರಣವಂ ...ಎನ್ನುವ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಪ್ರಶಸ್ತಿಗಳು
ಆರಿಝೋನ ಯುನಿವೆರ್ಸಿಟಿ ಇಂದ ಡಾಕ್ಟರೇಟ್
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
[ಬದಲಾಯಿಸಿ] ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಚಿತ್ರಗಳು
- ಜಾತಕಫಲ
- ಶ್ರೀಕೃಷ್ಣಗಾರುಡಿ
- ಮಹಿಷಾಸುರ ಮರ್ದಿನಿ
- ಕನ್ಯಾರತ್ನ
- ಶ್ರೀಶೈಲ ಮಹಾತ್ಮೆ
- ಸತಿಸಾವಿತ್ರಿ
- ಸಂಧ್ಯಾರಾಗ
- ರತ್ನಮಂಜರಿ
- ರಾಜದುರ್ಗದ ರಹಸ್ಯ
- ಪಾರ್ವತಿ ಕಲ್ಯಾಣ
- ನಂದಾದೀಪ
- ನವಜೀವನ
- ರಣಧೀರ ಕಂಠೀರವ
- ನಮ್ಮ ಊರು
- ನಮ್ಮ ಮಕ್ಕಳು
- ನಾಂದಿ
- ನಕ್ಕರೆ ಅದೇ ಸ್ವರ್ಗ
- ಪ್ರತಿಧ್ವನಿ
- ಪ್ರತಿಜ್ಞೆ
- ರೌಡಿರಂಗಣ್ಣ
- ರಾಣಿ ಹೊನ್ನಮ್ಮ
- ಸರ್ವಮಂಗಳ
- ಸತಿಸುಕನ್ಯ
- ಸಂತ ತುಕಾರಾಂ
- ಶ್ರೀ ರಾಮಾಂಜನೇಯ ಯುದ್ಧ.........ಹೀಗೆ ಹಲವಾರು.
[ಬದಲಾಯಿಸಿ] ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಮಧುರ ಗೀತೆಗಳು
- ನಾವಾಡುವ ನುಡಿಯೇ ಕನ್ನಡನುಡಿ - ಗಂಧದ ಗುಡಿ
- ನಗು ನಗುತ ನಲಿ ನಲಿ - ಬಂಗಾರದ ಮನುಷ್ಯ
- ವೈದೇಹಿ ಏನಾದಳು? - ದಶಾವತಾರ
- ಇಳಿದು ಬಾ ತಾಯೆ ಇಳಿದು ಬಾ - ಅರಿಶಿನ ಕುಂಕುಮ
- ಕಲ್ಲಾದೆ ಏಕೆಂದು ಬಲ್ಲೆ, ಶಿವನೇ - ಭಲೇ ಹುಚ್ಚ
- ಹಾರುತಿರುವ ಹಕ್ಕಿಗಳೇ - ಪ್ರತಿಧ್ವನಿ
- ಇವಳು ಯಾರು ಬಲ್ಲೆರೇನು - ಗೌರಿ
- ಒಲವಿನ ಪ್ರಿಯಲತೆ ಅವಳದೆ ಚಿಂತೆ - ಕುಲವಧು
- ಹಾಡೊಂದ ಹಾಡುವೆ ನೀ ಕೇಳು - ನಾಂದಿ
- ಬಾರೆ ಬಾರೆ ಚಂದದ ಚೆಲುವಿನ ತಾರೆ - ನಾಗರಹಾವು
- ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ - ಕಸ್ತೂರಿ ನಿವಾಸ
- ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು - ಕಸ್ತೂರಿ ನಿವಾಸ
- ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ -ನಾಗರಹಾವು
- ಸಂಗಮ ಸಂಗಮ ಅನುರಾಗ ತಂದ ಸಂಗಮ - ನಾಗರಹಾವು
- ಕಮಲದ ಹೂವಿಂದ ಕೆನ್ನೆಯ ಮಾಡಿದನು - ಬಾಳು ಬೆಳಗಿತು
- ಉತ್ತರ ಧ್ರುವದಿಂ ದಕ್ಶಿಣ ಧ್ರುವಕೂ - ಶರಪಂಜರ
- ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ - ಎರಡು ಕನಸು
- ಎಂದೆಂದೂ ನಿನ್ನನು ಮರೆತು ಬದುಕಿರಲಾರೆ - ಎರಡು ಕನಸು
- ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ - ಎರಡು ಕನಸು
- ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ - ಕನ್ಯಾರತ್ನ
- ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ - ಗಾಂಧಿ ನಗರ
- ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ - ದೂರದ ಬೆಟ್ಟ
- ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು - ನ್ಯಾಯವೇ ದೇವರು
- ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ - ಭಕ್ತ ಕನಕದಾಸ
- ಕುಲ ಕುಲ ಕುಲವೆಂದು ಹೊಡೆದಾಡದಿರಿ- ಭಕ್ತ ಕನಕದಾಸ
- ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ - ಸ್ವಯಂವರ
- ನಿಲ್ಲು ನೀ ನಿಲ್ಲು ನೀ ನೀಲವೇಣಿ - ಅಮರಶಿಲ್ಪಿ ಜಕ್ಕಣಾಚಾರಿ
- ಕಣ್ಣು ರೆಪ್ಪೆ ಒಂದನೊಂದು ಮರೆವುದೆ -
- ಆಗದು ಎಂದು ಕೈಲಾಗದು ಎಂದು ಕೈಕಟ್ಡಿ ಕುಳಿತರೆ -ಬಂಗಾರದ ಮನುಷ್ಯ
- ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ -ಬಂಗಾರದ ಮನುಷ್ಯ
- ಮೈಸೂರು ದಸರಾ ಎಷ್ಟೊಂದು ಸುಂದರ - ಕರುಳಿನಕರೆ
- ಯಾರು ಏನು ಮಾಡುವರು ನನಗೇನು ಕೇಡು ಮಾಡುವರು - ಕ್ರಾಂತಿವೀರ
- ನಿದಿರೆಯು ಸದಾ ಏಕೊ ದೂರ - ಸಿಪಾಯಿರಾಮು
- ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ - ಬೆಟ್ಟದ ಹುಲಿ
- ವೇದಾಂತಿ ಹೇಳಿದನು ಮಣ್ಣೆಲ್ಲ ಹೊನ್ನು ಹೊನ್ನು - ಮಾನಸ ಸರೋವರ
- ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ - ಸಂಧ್ಯಾರಾಗ
- ಆ ಮೊಗವು ಎಂಥ ಚೆಲುವು - ಬಂಗಾರದ ಹೂ
- ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು - ಪ್ರೇಮದ ಕಾಣಿಕೆ
- ಭಗವಂತ ಕೈ ಕೊಟ್ಟ ದುಡಿಯೋಕಂತ - ಮಣ್ಣಿನ ಮಗ
- ಆಡೋಣ ನೀನು ನಾನು, ನನ್ನ ಆಸೆ ತಾರೆ ನೀನು - ಕಸ್ತೂರಿ ನಿವಾಸ
- ಬಂದೆ ನೀ ಬಂದೆ ಮನದ ಮನೆಯ ಅತಿಥಿಯಾಗಿ - ಗಂಡೊಂದು ಹೆಣ್ಣಾರು
- ಬಾರೇ ನೀ ಚೆಲುವೆ, ನಿನ್ನಂದ ಚೆಂದ ಮಕರಂದ - ಸ್ವರ್ಣಗೌರಿ
- ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು - ವಿಜಯನಗರದ ವೀರಪುತ್ರ
- ಒಲುಮೆಯ ಹೊವೇ ನೀ ಹೋದೆ ಎಲ್ಲಿಗೆ?
- ಮೌನವೇ ಆಭರಣ,ಮುಗುಳ್ನಗೇ ಶಶಿಕಿರಣ
- ಅಮ್ಮಾ,ಅಮ್ಮಾ ನೀ ಅಮ್ಮಾ ಎಂದಾಗ ಎಂಥ ಸಂತೊಷವು
- ಎಲ್ಲಿ ಮರೆಯಾದೆ ವಿಠ್ಠಲ, ಏಕೇ ದೂರಾದೆ? - ಭಕ್ತ ಕುಂಬಾರ
- ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ
- ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ, ನಿಜ ಹೇಳಲೇನು - ಎರಡು ಕನಸು
- ಒಲವೆ ಜೀವನ ಸಾಕ್ಷಾತ್ಕಾರ - ಸಾಕ್ಷಾತ್ಕಾರ
- ರಂಗಿ ನಿನ್ ಮೇಲೆ ನನ್ನ ಮನಸೈತೆ ಕಣ್ ತುಂಬ ನಿನ್ ಗೊಂಬೆ ತುಂಬೈತೆ
- ನಿನದೆ ನೆನಪು ದಿನವು ಮನದಲ್ಲಿ - ರಾಜ ನನ್ನ ರಾಜ
- ನೂರು ಜನ್ಮ ಸಾಲದು ಈ ನಿನ್ನ ನೋಡಲು- ರಾಜ ನನ್ನ ರಾಜ
- ಬ್ರಹ್ಮಚಾರಿ ಮರುಳಾದ ಪ್ರೇಮ ದೇವಿಗೆ ಶರಣಾದ
- ಜಗದೀಶನಾಡುವ ಜಗವೇ ನಾಟಕ ರಂಗ
- ಜನ್ಮ ಜನ್ಮದ ಅನುಬಂಧ,ಹೃದಯ ಹೃದಯಗಳ ಪ್ರೇಮಾನುಬಂಧ - ಸಾಕ್ಷಾತ್ಕಾರ
- ಈ ದಿನ ಮಜ ಕಂಡೆನು ನಿಜ, ಆದೆನು ರಾಜ
- ಮನವೇ ಮಂದಿರ, ನ್ಯಾಯ ದೇಗುಲ - ತೂಗುದೀಪ
- ನನ್ನವಳು ನನ್ನೆದೆಯ, ಹೊನ್ನಾಡನಾಳುವಳು
- ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
- ಶುಭಮಂಗಳ, ಸುಮಹೂರ್ತವೇ, ಸುಖವೇ
- ಸಿಹಿಮುತ್ತು,ಸಿಹಿಮುತ್ತು ಎನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು- ನಾ ನಿನ್ನ ಮರೆಯಲಾರೆ
- ಒಂದು ಒಂದು ಮಾತು ನಾನು ಹೇಳಲೆ
- ರವಿವರ್ಮನ ಕುಂಚದ ಕಲೆ ಬಲೆ - ಸೊಸೆ ತಂದ ಸೌಭಾಗ್ಯ
- ಮಾನವ ದೇಹವು, ಮೂಳೆ ಮಾಂಸದ ತಡಿಕೆ - ಭಕ್ತ ಕುಂಬಾರ
- ಎಲ್ಲೂ ಹೋಗೊಲ್ಲ ಮಾಮ, ಎಲ್ಲೂ ಹೋಗೊಲ್ಲ - ಗಂಧದ ಗುಡಿ
- ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ
- ಹಾಡೊಂದ ಹಾಡುವೆ ನೀ ಕೇಳು ಮಗುವೇ - ನಾಂದಿ
- ಹಳ್ಳಿಯಾದರೇನು ಶಿವ.... - ಮೇಯರ್ ಮುತ್ತಣ್ಣ
[ಬದಲಾಯಿಸಿ] ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಪಿ.ಬಿ.ಶ್ರೀನಿವಾಸ್
[ಬದಲಾಯಿಸಿ] ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು
ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ | ಸುಬ್ಬಯ್ಯ ನಾಯ್ಡು | ಆರ್.ನಾಗೇಂದ್ರರಾಯ | ಹೊನ್ನಪ್ಪ ಭಾಗವತರ್ | ಪಿ. ಕಾಳಿಂಗರಾವ್ | ಚೆಂಬಯ್ ವೈದ್ಯನಾಥ ಭಾಗವತರ್ | ಪಿ.ಬಿ.ಶ್ರೀನಿವಾಸ್ | ಘಂಟಸಾಲ | ಜಿ.ಕೆ.ವೆಂಕಟೇಶ್ | ಡಾ. ರಾಜ್‌ಕುಮಾರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಕೆ.ಜೆ.ಯೇಸುದಾಸ್ | ರಾಜೇಶ್ ಕೃಷ್ಣನ್ | ಶಿವರಾಜ್‍ಕುಮಾರ್ | ಉಪೇಂದ್ರ | ಹರಿಹರನ್ | ಹೇಮಂತ್ | ಶಂಕರ್ ಮಹಾದೇವನ್ | ಪ್ರೇಂ | ಚೇತನ್ ಸಾಸ್ಕ | ಅನೂಪ್ | ಫಯಾಜ್ ಖಾನ್ | ಕಾಶೀನಾಥ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್‍ಕುಮಾರ್ | ಭೀಮಸೇನ್ ಜೋಷಿ | ಬಾಲಮುರಳಿ ಕೃಷ್ಣ | ಜಗ್ಗೇಶ್ | ಗುರುಕಿರಣ್ | ರಾಮ್ ಪ್ರಸಾದ್ |