ರಾಮ್ ಪ್ರಸಾದ್
From Wikipedia
ರಾಮ್ ಪ್ರಸಾದ್. ಇವರು ಮೂಡಲ್ ಕುಣಿಗಲ್ ಕೆರೆ ರಾಮ್ ಪ್ರಸಾದ್ ಎಂದೇ ಬಹು ಮಂದಿಗೆ ಪರಿಚಿತರು. 'ಮೂಡಲ್ ಕುಣಿಗಲ್ ಕೆರೆ' ಎಂಬ ಜಾನಪದ ಹಾಡನ್ನು "ನನ್ನ ಪ್ರೀತಿಯ ಹುಡುಗಿ" ಚಿತ್ರದಲ್ಲಿ ಮನೋ ಮೂರ್ತಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಳಸಿಕೊಂಡರು. ಈ ಹಾಡನ್ನು ಹಾಡಿದವರು ಈ ರಾಮ್ ಪ್ರಸಾದ್. ಇವರ ಸಂಪೂರ್ಣ ಹೆಸರು ಎಚ್.ವಿ.ರಾಮ್ ಪ್ರಸಾದ್. ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದರು. ನಂತರ ಅಮೆರಿಕಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ತಮ್ಮ ಸಂಗೀತದ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಮುಂದುವರೆಸಲು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ನನ್ನ ಪ್ರೀತಿಯ ಹುಡುಗಿ ಚಿತ್ರ ಅಲ್ಲದೆ, ಪ್ರೀತಿ ಪ್ರೇಮ ಪ್ರಣಯ, ಅಮೃತ ಧಾರೆ ಚಿತ್ರಗಳಲ್ಲೂ ಹಾಡಿದ್ದಾರೆ. ಮತ್ತು ಹಲವು ಭಾವಗೀತೆಗಳ ಕ್ಯಾಸೆಟ್ಟುಗಳನ್ನು ಹೊರ ತಂದಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ "ನಿನ್ನ ಕನಸುಗಳಲ್ಲಿ" .
[ಬದಲಾಯಿಸಿ] ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು
ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ | ಸುಬ್ಬಯ್ಯ ನಾಯ್ಡು | ಆರ್.ನಾಗೇಂದ್ರರಾಯ | ಹೊನ್ನಪ್ಪ ಭಾಗವತರ್ | ಪಿ. ಕಾಳಿಂಗರಾವ್ | ಚೆಂಬಯ್ ವೈದ್ಯನಾಥ ಭಾಗವತರ್ | ಪಿ.ಬಿ.ಶ್ರೀನಿವಾಸ್ | ಘಂಟಸಾಲ | ಜಿ.ಕೆ.ವೆಂಕಟೇಶ್ | ಡಾ. ರಾಜ್‌ಕುಮಾರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಕೆ.ಜೆ.ಯೇಸುದಾಸ್ | ರಾಜೇಶ್ ಕೃಷ್ಣನ್ | ಶಿವರಾಜ್‍ಕುಮಾರ್ | ಉಪೇಂದ್ರ | ಹರಿಹರನ್ | ಹೇಮಂತ್ | ಶಂಕರ್ ಮಹಾದೇವನ್ | ಪ್ರೇಂ | ಚೇತನ್ ಸಾಸ್ಕ | ಅನೂಪ್ | ಫಯಾಜ್ ಖಾನ್ | ಕಾಶೀನಾಥ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್‍ಕುಮಾರ್ | ಭೀಮಸೇನ್ ಜೋಷಿ | ಬಾಲಮುರಳಿ ಕೃಷ್ಣ | ಜಗ್ಗೇಶ್ | ಗುರುಕಿರಣ್ | ರಾಮ್ ಪ್ರಸಾದ್ |